ಹೆಬ್ರಿ: ನೇಣು ಬಿಗಿದು ಯುವಕ ಆತ್ಮಹತ್ಯೆ
Update: 2018-02-27 20:38 IST
ಹೆಬ್ರಿ, ಫೆ.27: ಟಿವಿ ಶಬ್ದ ಕಡಿಮೆ ಮಾಡುವಂತೆ ಹೇಳಿದಕ್ಕೆ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಕುಚ್ಚೂರು ಗ್ರಾಮದ ಕೆಳಬಾದ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಕೆಳಬಾದ್ಲುವಿನ ಶೇಖರ ಎಂಬವರ ಪುತ್ರ ಮಂಜುನಾಥ ನಾಯ್ಕ (23) ಎಂದು ಗುರುತಿಸಲಾಗಿದೆ.
ಮದ್ಯ ಸೇವನೆ ಮಾಡಿ ಮನೆಗೆ ಬಂದ ಮಂಜುನಾಥ ನಂತರ ಟಿ.ವಿ. ನೋಡುತ್ತಿದ್ದ ಎನ್ನಲಾಗಿದ್ದು, ಈ ಸಂದರ್ಭ ಶೇಖರ್ ಅವರು ಟಿವಿಯ ಶಬ್ದವನ್ನು ಕಡಿಮೆ ಮಾಡುವಂತೆ ಹೇಳಿದರು. ಅದಕ್ಕೆ ಬೇಸರಗೊಂಡ ಮಂಜುನಾಥ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.