ಎಲ್ಲೂರು: ಮಾ.2ರಂದು ಆಧ್ಯಾತ್ಮಿಕ ಮಜ್ಲಿಸ್
Update: 2018-02-27 22:03 IST
ಮಂಗಳೂರು, ಫೆ. 27: ಉಚ್ಚಿಲ ಸಮೀಪದ ಎಲ್ಲೂರಿನ ದಾರುಲ್ ಅಮಾನ್ ವಿದ್ಯಾ ಸಂಸ್ಥೆಯ ವತಿಯಿಂದ ಮಾ. 2ರಂದು ಮಧ್ಯಾಹ್ನ 3 ಗಂಟೆಗೆ ಎಲ್ಲೂರಿನ ಹಿರಾನಗರದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಧಾರ್ಮಿಕ ಶಿಬಿರ ನಡೆಯಲಿದೆ.
ದಾರುಲ್ ಅಮಾನ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಅಲ್‌ಹಾಜ್ ಸಲೀಂ ಮದನಿ ಕುತ್ತಾರು ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಬ್ಬಾರ್ ಸಅದಿ ರಿಬ್ಬನ್‌ಪೇಟೆ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.