×
Ad

ಸಿರಿಯ: ನೆರವಿಗೆ ಪ್ರತಿಯಾಗಿ ಸಂತ್ರಸ್ತೆಯರ ಲೈಂಗಿಕ ದುರ್ಬಳಕೆ

Update: 2018-02-27 22:12 IST

ಲಂಡನ್, ಫೆ. 27: ಯುದ್ಧಪೀಡಿತ ಸಿರಿಯದಲ್ಲಿ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನೆರವು ಸಂಘಟನೆಗಳ ಪರವಾಗಿ ನೆರವು ಸಾಮಗ್ರಿಗಳನ್ನು ವಿತರಿಸುವ ಕೆಲಸಗಾರರು ಸಂತ್ರಸ್ತ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಲೈಂಗಿಕವಾಗಿ ಸಹಕರಿಸುವ ಸಂತ್ರಸ್ತ ಮಹಿಳೆಯರಿಗೆ ನೆರವು ಸಂಘಟನೆಗಳ ಕಾರ್ಯಕರ್ತರು ಪರಿಹಾರ ಸಾಮಗ್ರಿಗಳನ್ನು ನೀಡುತ್ತಾರೆ ಹಾಗೂ ವಾಹನ ಸಂಚಾರದ ಸೌಲಭ್ಯ ಒದಗಿಸುತ್ತಾರೆ ಎಂಬುದಾಗಿ ಇತರ ಕಾರ್ಯಕರ್ತರು ಬಿಬಿಸಿಗೆ ಹೇಳಿದ್ದಾರೆ.

ಈ ರೀತಿಯ ಲೈಂಗಿಕ ಶೋಷಣೆ ಎಷ್ಟರ ಮಟ್ಟಿಗೆ ವ್ಯಾಪಿಸಿದೆಯೆಂದರೆ, ಕೆಲವು ಮಹಿಳೆಯರು ನೆರವು ವಿತರಣಾ ಕೇಂದ್ರಗಳಿಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಯಾಕೆಂದರೆ, ಹಾಗೆ ಬರುವ ಮಹಿಳೆಯರು ಲೈಂಗಿಕವಾಗಿ ಸಹಕರಿಸಲು ಸಿದ್ಧ ಎಂಬುದಾಗಿ ಪರಿಹಾರ ವಿತರಕರು ಪರಿಗಣಿಸುತ್ತಾರೆ ಎಂದು ಬಿಬಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News