‘ಬುದ್ಧಿಸ್ಟ್ ಬಿನ್ ಲಾಡನ್’ ಫೇಸ್‌ಬುಕ್ ಪುಟ ರದ್ದು

Update: 2018-02-27 16:44 GMT
ಬೌದ್ಧ ಭಿಕ್ಕು ವಿರತು

ಯಾಂಗನ್ (ಮ್ಯಾನ್ಮಾರ್), ಫೆ. 27: ಮುಸ್ಲಿಮರ ಬಗ್ಗೆ ಪ್ರಚೋದನಾತ್ಮಕ ಬರಹಗಳನ್ನು ಹಾಕುತ್ತಿದ್ದ ಹಾಗೂ ಅದಕ್ಕಾಗಿ ‘ಬುದ್ಧಿಸ್ಟ್ ಬಿನ್ ಲಾಡನ್’ ಎಂಬುದಾಗಿ ಬಣ್ಣಿಸಲ್ಪಟ್ಟಿದ್ದ ಮ್ಯಾನ್ಮಾರ್‌ನ ಬೌದ್ಧ ಭಿಕ್ಕು ವಿರತು ಎಂಬಾತನ ಫೇಸ್‌ಬುಕ್ ಪುಟವನ್ನು ಅಳಿಸಿಹಾಕಿರುವುದಾಗಿ ಫೇಸ್‌ಬುಕ್ ತಿಳಿಸಿದೆ.

ಆತನು ತನ್ನ ಫೇಸ್‌ಬುಕ್ ಪುಟದಲ್ಲಿ ರೊಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅತ್ಯಂತ ಪ್ರಚೋದನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ. ಅದಕ್ಕಾಗಿಯೇ ಆತ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದ್ದ.

‘‘ಇತರರ ವಿರುದ್ಧ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ಕಾರ್ಯದಲ್ಲಿ ನಿರತವಾಗಿರುವ ಸಂಘಟನೆಗಳು ಮತ್ತು ಜನರನ್ನು ನಮ್ಮ ಸಮುದಾಯ ಮಾನದಂಡಗಳು ನಿಷೇಧಿಸುತ್ತವೆ’’ ಎಂದು ಫೇಸ್‌ಬುಕ್ ವಕ್ತಾರರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News