ಜಾರ್ಖಂಡ್ ಸರಕಾರದ ವಿರುದ್ಧ ಪಿಎಫ್‌ಐ ಪ್ರತಿಭಟನೆ
Update: 2018-02-27 22:24 IST
ಮಂಗಳೂರು, ಫೆ. 27: ಜಾರ್ಖಂಡ್ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನು ಖಂಡಿಸಿ ಪಿ.ಎಫ್.ಐ. ಬಜ್ಪೆ ಡಿವಿಷನ್ ವತಿಯಿಂದ ಪ್ರತಿಭಟನಾ ಸಭೆಯು ಬಜ್ಪೆ ಜಂಕ್ಷನ್‌ನಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಪಿ.ಎಫ್.ಐ. ಜಿಲ್ಲಾ ಸಮಿತಿಯ ಸದ್ಯಸ ಅಶ್ರಫ್ ಮಾತನಾಡಿದರು. ನವಾಝ್ ಕಾವೂರ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪಿ.ಎಫ್.ಐ. ಬಜ್ಪೆ ಡಿವಿಷನ್‌ನ ಅಧ್ಯಕ್ಷ ಇಸ್ಮಾಯಿಲ್ ಎಂಜಿನಿಯರ್ ವಹಿಸಿದ್ದರು.
ಪ್ರತಿಭಟನೆಯಲ್ಲಿ ಪಿ.ಎಫ್.ಐ. ಬಜ್ಪೆ ವಲಯ ಕಾರ್ಯದರ್ಶಿ ಹಸೈನಾನ್, ಕಾವೂರ್ ವಲಯಾಧ್ಯಕ್ಷ ನೌಷದ್, ಜೋಕಟ್ಟೆ ವಲಯ ಕಾರ್ಯದರ್ಶಿ ಇಮ್ತಿಯಾಝ್, ಬಜ್ಪೆ ಗ್ರಾಮ ಸದಸ್ಯ ನಝೀರ್ ಉಪಸ್ಥಿತರಿದ್ದರು. ಸಾಹಿಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.