ಪಿ.ಎ. ಇಂಜನಿಯರಿಂಗ್ ಕಾಲೇಜ್‌ನಲ್ಲಿ ಔಟ್ರೀಚ್ ಕಾರ್ಯಕ್ರಮ
ಮಂಗಳೂರು, ಫೆ. 27: ಪಿ.ಎ. ಇಂಜನಿಯರಿಂಗ್ ಕಾಲೇಜ್ ನ ಕಂಪ್ಯೂಟರ್ ಸಯನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ಪಿ.ಎ. ಪಾಲಿಟೆಕ್ನಿಕ್ ಸಿಎಸ್ ವಿಭಾಗದ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳಿಗೆ ಔಟ್ರೀಚ್ ಕಾರ್ಯಕ್ರಮ ಪಿ.ಎ.ಕಾಲೇಜ್ ನಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪಿ.ಎ ಕಾಲೇಜ್ ನ ಪ್ರಾಧ್ಯಾಪಕ ರಿಮಾಝ್ ಫೈಝಾಬಾದಿ "ಕಂಪ್ಯೂಟರ್ ಸೈನ್ಸ್ ನ ವೈಶಿಷ್ಟ್ಯತೆ"ಯ ಬಗ್ಗೆ ಮಾತನಾಡಿದರು ಹಾಗೂ ಪ್ರಾಧ್ಯಾಪಕ ತನ್ವೀರ್ ಹಬೀಬ್ ಸರ್ದಾರ್ ರವರು " ಬಿಗ್ ಡಾಟಾ ಮತ್ತು ಅನೆಲೆಟಿಕ್" ನ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು.
ಪಿ.ಎ ಕಾಲೇಜ್‌ನ ಸಿಎಸ್ ವಿಭಾಗದ ಮುಖ್ಯಸ್ಥರಾದ ಡಾ. ಶರ್ಮಿಲಾ ಕುಮಾರಿಯವರು ಉನ್ನತ ಶಿಕ್ಷಣದ ಪ್ರಯೋಜನದ ಬಗ್ಗೆ ಮಾತನಾಡಿದರು. ಪಿ.ಎ.ಕಾಲೇಜ್‌ನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್ ಅಧ್ಯಕ್ಷೀಯ ಭಾಷಣಗೈದರು.
ಪಿ.ಎ. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಪೊ. ಕೆ.ಪಿ.ಸೂಫಿ ಹಾಗೂ ಸಿಎಸ್ ವಿಭಾಗದ ಮುಖ್ಯಸ್ಥರಾದ ಅರುಣಾ ಕುಮಾರಿ ಹಾಗೂ ಈ ಕಾರ್ಯಕ್ರಮದ ಸಂಚಾಲಕರಾದ ಪೊ. ಹಬೀಬ್ ರಹ್ಮಾನ್ ಉಪಸ್ಥಿತರಿದ್ದರು. ಪೊ. ಸೈಫುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿದರು.