ಸಿರಿಯಾದ ಆಫ್ರಿನ್ ಗಡಿ ಟರ್ಕಿ ವಶಕ್ಕೆ

Update: 2018-02-28 15:04 GMT

ಅಂಕಾರಾ/ ಬೀರಟ್, ಫೆ.28: ಸಿರಿಯಾದ ಆಫ್ರಿನ್ ಪ್ರದೇಶದ ಹೊರಭಾಗದ ಗಡಿಯ ಅಂಚನ್ನು ಟರ್ಕಿ ಸೇನೆ ವಶಕ್ಕೆ ಪಡೆದಿದೆ. ಈ ಮಧ್ಯೆ ಹೊಸ ಯುದ್ಧಕ್ಕಾಗಿ ಪೊಲೀಸ್ ಮತ್ತು ವಿಶೇಷ ಪಡೆಯನ್ನು ನಿಯೋಜಿಸುವ ಮೂಲಕ ಸಜ್ಜಾಗಿರುವುದಾಗಿ ಟರ್ಕಿ ಘೋಷಿಸಿದೆ.

ಮಿಲಿಟರಿ ಮತ್ತು ಸಿರಿಯನ್ ಬಂಡುಕೋರ ಬಣಗಳ ಮೈತ್ರಿಕೂಟ ಸಿರಿಯಾದ ಖುರ್ದಿಷ್ ವೈಪಿಜಿ ಹೋರಾಟಗಾರರನ್ನು ಟರ್ಕಿಯ ಗಡಿಭಾಗದಿಂದ ಹಿಮ್ಮೆಟ್ಟಿಸಿದ್ದಾರೆ. ಈ ಮೂಲಕ ಸಿರಿಯಾದ ಬದಿಯ ಗಡಿಯನ್ನು ಅಕ್ಷರಶಃ ವಶಪಡಿಸಿಕೊಂಡಿದ್ದಾರೆ ಎಂದು ಸರ್ಕಾರಿ ಸುದ್ದಿಸಂಸ್ಥೆ ಅನದೊಲು ವರದಿ ಮಾಡಿದೆ.

ಸಿರಿಯಾದ ವಾಯವ್ಯ ಭಾಗದಿಂದ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಟರ್ಕಿ 115 ಆಯಕಟ್ಟಿನ ಪ್ರದೇಶಗಳನ್ನು ಮತ್ತು 87 ಗ್ರಾಮಗಳನ್ನು ವಶಕ್ಕೆ ಪಡೆದಿದೆ ಎಂದು ಅನದೊಲು ಹೇಳಿಕೊಂಡಿದೆ. ಆದರೆ ಟರ್ಕಿ ಯುದ್ಧವಿಮಾನಗಳನ್ನು ಆಫ್ರೀನ್‍ನ ನೈರುತ್ಯದ ಜಂದಾರೀಸ್ ಗ್ರಾಮದಲ್ಲಿ ಹೊಡೆದುರುಳಿಸಲಾಗಿದ್ದು, ಐದು ಮಂದಿ ನಾಗರಿಕರು ಸತ್ತಿದ್ದಾಗಿ ಸಿರಿಯನ್ ಖುರ್ದಿಷ್ ವೈಪಿಜಿ ಪಡೆ ಹೇಳಿಕೊಂಡಿದೆ.

ಟರ್ಕಿ ದಾಳಿಗೆ ಉತ್ತರವಾಗಿ ವೈಪಿಜಿ ನೇತೃತ್ವದ ಮೈತ್ರಿಕೂಟದ ಪಡೆಗಳು ಸ್ವಯಂ ರಕ್ಷಣೆಗೆ ಒತ್ತು ನೀಡಿವೆ. ಆಫ್ರಿನ್‍ನ ಸುತ್ತಮುತ್ತ ಬಹುವಿಧದ ಯುದ್ಧ ನಡೆಯುತ್ತಿದೆ. ಐದು ಮಂದಿ ಟರ್ಕಿ ಸೈನಿಕರನ್ನು ಕಳೆದ 24 ಗಂಟೆಗಳಲ್ಲಿ ಕೊಲ್ಲಲಾಗಿದೆ ಎಂದು ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ (ಎಸ್‍ಡಿಎಫ್) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News