×
Ad

ಸಿಂಡಿಕೇಟ್ ಬ್ಯಾಂಕ್: ಸ್ಥಾಪಕ ದಿನಾಚರಣೆ

Update: 2018-02-28 21:01 IST

ಮಂಗಳೂರು, ಫೆ. 28: ಸಿಂಡಿಕೇಟ್ ಬ್ಯಾಂಕ್ ನಗರದ ಲಾಲ್‌ಬಾಗ್ ಶಾಖೆಯ ಸ್ಥಾಪಕ ದಿನಾಚರಣೆಯು ಬುಧವಾರ ಆಚರಿಸಲಾಯಿತು.

ಬಾಂಕಿನ ಪ್ರಬಂಧಕಿ ಶಾಂಭವಿ ಪ್ರಭು ಅವರು ಬ್ಯಾಂಕಿನ ಸವಲತ್ತುಗಳನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಬ್ಯಾಂಕ್‌ನ ನಿವೃತ್ತ ಮ್ಯಾನೆಜರ್ ಹಾಗೂ ಲಯನ್ಸ್ ಕ್ಲಬ್ ಜಿಲ್ಲಾ ಸಂಯೋಜಕ ಬಿ. ಪ್ರಕಾಶ್ ಪೈ ಮತ್ತು ಬ್ಯಾಂಕಿನ ಪಿಂಚಣಿದಾರರು ಹಾಗೂ ನಿವೃತ್ತಿ ನೌಕರರ ಸಂಘದ ಪ್ರಾಂತೀಯ ಕಾರ್ಯದರ್ಶಿ ಕೆ. ವಸಂತ್ ರಾವ್, ಲಯನ್ಸ್ ಕ್ಲಬ್ ಮಂಗಳೂರು-ಕಾವೇರಿ ಇದರ ಅಧ್ಯಕ್ಷೆ ಲಯನ್ ಪ್ರಿಯಾದರ್ಶಿನಿ ರೈ ಡಿಸೋಜ,ಬ್ಯಾಂಕಿನ ನಿವೃತ್ತ ಅಧಿಕಾರಿ ಮೆರಿಯನ್ ಡಿಸೋಜ, ಬ್ಯಾಂಕಿನ ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಾಂಕಿನ ಪ್ರಬಂಧಕಿ ಶಾಂಭವಿ ಪ್ರಭು ಸ್ವಾಗತಿಸಿದರು. ಮೇಬಲ್ ಮೆನೇಜಸ್ ವಂದಿಸಿದರು. ಸದಾಶಿವ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News