×
Ad

ಎನ್ ಡಿಎ ತೊರೆದು ಆರ್ ಜೆಡಿಯ ಮಹಾ ಘಟಬಂಧನ ಸೇರಿದ ಜಿತನ್ ರಾಮ್ ಮಾಂಝಿ

Update: 2018-02-28 22:30 IST

ಬಿಹಾರ, ಫೆ.28: ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗು ಹಿಂದೂಸ್ತಾನಿ ಅವಂ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ರಾಷ್ಟ್ರೀಯ ಜನತಾದಳ ಮಹಾ ಘಟಬಂಧನ ಸೇರ್ಪಡೆಗೊಂಡಿದ್ದಾರೆ.

“ಮಹಾಘಟಬಂಧನದೊಂದಿಗೆ ನಮ್ಮ ಮೈತ್ರಿಯನ್ನು ನಾನು ಇಂದು ಘೋಷಿಸುತ್ತಿದ್ದೇನೆ” ಮಾಂಝಿ ಪತ್ರಕರ್ತರಿಗೆ ಹೇಳಿದರು. ರಾಬ್ರಿ ದೇವಿಯೊಂದಿಗಿನ ಮಾತುಕತೆಯ ನಂತರ ಇಂದು ಜಿತನ್ ರಾಮ್ ಎನ್ ಡಿಯ ಮೈತ್ರಿಕೂಟದಿಂದ ಹೊರ ಬಂದಿದ್ದರು.

ಲಾಲೂ ಪ್ರಸಾದ್ ಯಾದವ್ ರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಮಾಂಝಿ ಲಾಲೂ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ. ಅವರು ಬಿಹಾರದ ಮಹಾ ಘಟಬಂಧನಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ತೇಜಸ್ವಿ ಯಾದವ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News