ಬಂಡಿಪೊರಾದಲ್ಲಿ ಹಿಮಪಾತ: ಓರ್ವ ಸಾವು
Update: 2018-03-01 20:09 IST
ಶ್ರೀನಗರ, ಮಾ. 1: ಜಮ್ಮು ಹಾಗೂ ಕಾಶ್ಮೀರದ ಬಂಡಿಪೊರಾದಲ್ಲಿ ಬುಧವಾರ ಸಂಭವಿಸಿದ ಹಿಮಪಾತದಿಂದ ಗಂಭೀರ ಗಾಯಗೊಂಡಿದ್ದ 25 ವರ್ಷದ ಯುವಕನೋರ್ವ ಮೃತಪಟ್ಟಿದ್ದಾರೆ.ಇದಲ್ಲದೆ, ಕಳೆದ ತಿಂಗಳು ಸಂಭವಿಸಿದ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಮೂವರ ಮೃತದೇಹ ಗುರುವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡಿಪೊರ ಜಿಲ್ಲೆಯ ತುಲೈಲ್‌ನ ಹಸನ್‌ಗಾಂವ್-ಮಲಂಗಾಂವ್‌ನಲ್ಲಿ ಬುಧವಾರ ಸಂಭವಿಸಿದ ಹಿಮಪಾತದ ಪರಿಣಾಮ ಇಬ್ಬರು ಗಾಯಗೊಂಡಿದ್ದರು. ಅವರನ್ನು ತುಲೈಲ್‌ನಲ್ಲಿರುವ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಓರ್ವ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ ಯುವಕನನ್ನು ಅಬ್ದುಲ್ ಅಝೀಜ್ ಬೇಗ್ ಹಾಗೂ ಗಾಯಗೊಂಡ ಯುವಕನನ್ನು ಹಲೀಮ್ ಬೇಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.