×
Ad

ಇನ್ಸ್‌ಪೈರ್ ಅವಾರ್ಡ್: ಆಳ್ವಾಸ್ ವಿದ್ಯಾರ್ಥಿ ವಿವೇಕಾನಂದ ಕೆಂಗನಾಲ್ ರಾಷ್ಟ್ರ ಮಟ್ಟಕ್ಕೆ

Update: 2018-03-01 22:28 IST

ಮೂಡುಬಿದಿರೆ, ಮಾ.1: ದಾವಣಗೆರೆಯ ಜೈನ್ ವಿದ್ಯಾಲಯದಲ್ಲಿ ನಡೆದ ಇನ್ಸ್‌ಸೈರ್ ಅವಾರ್ಡ್ ಮನಕ್ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 9ನೇ ತರಗತಿ ವಿದ್ಯಾರ್ಥಿ ವಿವೇಕಾನಂದ ಕೆಂಗನಾಲ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಹಾಗೂ ಶಾಲೆಯ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News