×
Ad

ಯೇಸು ಕ್ರಿಸ್ತ ಕುರಿತ ಗಾಂಧೀಜಿ ಪತ್ರ ಮಾರಾಟಕ್ಕೆ

Update: 2018-03-01 22:37 IST

ವಾಶಿಂಗ್ಟನ್, ಮಾ. 1: ಯೇಸು ಕ್ರಿಸ್ತರ ಅಸ್ತಿತ್ವದ ಬಗ್ಗೆ ಮಹಾತ್ಮಾ ಗಾಂಧಿ 1926ರಲ್ಲಿ ಬರೆದಿರುವ ಭಾವನಾತ್ಮಕ ಪತ್ರವೊಂದನ್ನು ಅಮೆರಿಕದಲ್ಲಿ ಮಾರಾಟಕ್ಕೆ ಇಡಲಾಗಿದೆ. ಅದರ ಬೆಲೆಯನ್ನು 50,000 ಡಾಲರ್ (ಸುಮಾರು 32.61 ಲಕ್ಷ ರೂಪಾಯಿ) ಎಂದು ನಿಗದಿಪಡಿಸಲಾಗಿದೆ.

1926 ಎಪ್ರಿಲ್ 6ರ ಪತ್ರವನ್ನು ಗಾಂಧೀಜಿ ತನ್ನ ಗುಜರಾತ್‌ನಲ್ಲಿರುವ ಸಾಬರಮತಿ ಆಶ್ರಮದಿಂದ ಬರೆದಿದ್ದರು.

ತೆಳು ಶಾಯಿಯಲ್ಲಿ ಟೈಪ್ ಮಾಡಲಾಗಿರುವ ಹಾಗೂ ದಪ್ಪಕ್ಷರದ ಸಹಿ ಹೊಂದಿರುವ ಪತ್ರವು ಕಳೆದ ಹಲವಾರು ದಶಕಗಳಲ್ಲಿ ಖಾಸಗಿ ವ್ಯಕ್ತಿಯೊಬ್ಬರ ವಶದಲ್ಲಿತ್ತು. ಈಗ ಅದನ್ನು ಪೆನ್ಸಿಲ್ವೇನಿಯದ ‘ರಾಬ್ ಕಲೆಕ್ಷನ್’ ಮಾರಾಟ ಮಾಡುತ್ತಿದೆ.

‘‘ಯೇಸು ಮಾನವಕುಲದ ಶ್ರೇಷ್ಠ ಮಾರ್ಗದರ್ಶಕರಲ್ಲಿ ಒಬ್ಬರು’’ ಎಂಬುದಾಗಿ ಅಮೆರಿಕದ ಕ್ರೈಸ್ತ ಧರ್ಮದ ಹಿರಿಯ ಮಿಲ್ಟನ್ ನ್ಯೂಬೆರಿ ಫ್ರಾಂಟ್ಝ್ ಎಂಬವರಿಗೆ ಬರೆದ ಪತ್ರದಲ್ಲಿ ಗಾಂಧೀಜಿ ಹೇಳುತ್ತಾರೆ.

‘‘ಅದೊಂದು ಪ್ರಭಾವಶಾಲಿ ಭಾವನಾತ್ಮಕ ಪತ್ರವಾಗಿದೆ’’ ಎಂದು ರಾಬ್ ಕಲೆಕ್ಷನ್‌ನ ಪ್ರಿನ್ಸಿಪಾಲ್ ನತಾನ್ ರಾಬ್ ಹೇಳುತ್ತಾರೆ.

ಇತರ ಧರ್ಮಗಳಿಗೆ ಗಾಂಧೀಜಿ ನೀಡುವ ಗೌರವವೇ ಅವರ ಪತ್ರವನ್ನು ಪ್ರಭಾವಶಾಲಿಯಾಗಿಸಿದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News