ಜಿನ್‌ಪಿಂಗ್ ಜೀವನಪರ್ಯಂತ ಅಧ್ಯಕ್ಷರಲ್ಲ: ಚೀನಾ ಪತ್ರಿಕೆ
Update: 2018-03-01 22:59 IST
ಬೀಜಿಂಗ್, ಮಾ. 1: ಅಧ್ಯಕ್ಷರ ಅವಧಿಗಳ ಮಿತಿಯನ್ನು ರದ್ದುಪಡಿಸಿ ಚೀನಾ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆಯಾದರೂ, ಯಾರಾದರೂ ಜೀವನ ಪರ್ಯಂತ ಅಧ್ಯಕ್ಷರಾಗಿರಬಹುದು ಎನ್ನುವುದು ಅದರ ಅರ್ಥವಲ್ಲ ಎಂದು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಅಧಿಕೃತ ಪತ್ರಿಕೆ ‘ಪೀಪಲ್ಸ್ ಡೇಲಿ’ ಗುರುವಾರ ಹೇಳಿದೆ.
ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೀವನಪರ್ಯಂತ ಅಧ್ಯಕ್ಷರಾಗಿ ಮುಂದುವರಿಯಬಹುದು ಎಂಬ ಕಳವಳ ವ್ಯಾಪಕವಾಗಿ ಹಬ್ಬುತ್ತಿರುವಂತೆಯೇ, ಪತ್ರಿಕೆ ಈ ಬಗ್ಗೆ ಲೇಖನವೊಂದನ್ನು ಪ್ರಕಟಿಸಿದೆ.