ಮಾರ್ಚ್ 2ರಂದು ಆಳ್ವಾಸ್‌ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ
ಮೂಡುಬಿದಿರೆ, ಮಾ. 1: ಆಳ್ವಾಸ್ ಕಾಲೇಜು ಮೂಡಬಿದಿರೆಯ ಜೀವತಂತ್ರಜ್ಞಾನ ವಿಭಾಗವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಇವರ ಸಹಯೋಗದಲ್ಲಿ ಮಾರ್ಚ್ 2ರಂದು ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಒಂದು ದಿನದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.
‘ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸ್ತುತ ವಿದ್ಯಮಾನಗಳು-ಜೀವಶಾಸ್ತ್ರದಲ್ಲಿ ಇವುಗಳ ಮಹತ್ವ' ಎಂಬ ಶಿರ್ಷಿಕೆಯಡಿ ನಡೆಯಲಿರುವುದು. ಕಾರ್ಯಕ್ರಮವು ಜೀವತಂತ್ರಜ್ಞಾನ ವಿಭಾಗದ ಹಳೆವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ವಿಭಾಗದ ಹಳೆವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಂಗಳೂರಿನ ವಿಜ್ಞಾನಿ ಡಾ. ನಂದಿನಿ ಕೆ., ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಡಾ. ಅರುಣ್ ಎನ್.ಎಲ್., ಛತ್ತಿಸ್‌ಗಡದ ಮೈತ್ರಿದಂತ ಮಹಾವಿದ್ಯಾಲಯದ ಸಹಪ್ರಾದ್ಯಾಪಕ ಡಾ. ಕಿರಣ್ ಕುಮಾರ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಶಮಾ ರಾವ್, ಮಾಹೆಯ ಡಾ. ಸುದರ್ಶನ ಕಿಣಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಮುಖ್ಯ ಅತಿಥಿಯಾಗಿರುವರು.
ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳಿಗೆ ಸಹಕಾರಿಯಾಗುವಂತೆ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಿಂದ ಉಪನ್ಯಾಸದ ಜತೆಗೆ ಮೌಖಿಕ ಪ್ರಬಂಧ ಮಂಡನೆ ಹಾಗೂ ಬಿತ್ತಿಪತ್ರ ಮಂಡನೆ ಇರುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಎಂದು ಸಮ್ಮೇಳನದ ಸಂಯೋಜಕ, ಜೀವತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್‌ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.