×
Ad

ಕರ್ಣಾಟಕ ಬ್ಯಾಂಕ್‌ಗೆ ‘ಇಟಿ ನೌ ಬಿಎಫ್‌ಎಸ್‌ಐ’ ಪುರಸ್ಕಾರ

Update: 2018-03-01 23:59 IST

ಮಂಗಳೂರು, ಮಾ.1: ಗ್ರಾಮೀಣ ಭಾಗದಲ್ಲಿ ಅತ್ಯಧಿಕ ಶಾಖೆಗಳನ್ನು ವಿಸ್ತರಿಸಿದ ಬ್ಯಾಂಕ್ ಹಾಗೂ ವಿತ್ತೀಯ ಸೇರ್ಪಡೆ ಅಭಿಯಾನದಲ್ಲಿ ಮುಂಚೂಣಿ ಯಲ್ಲಿರುವ ಬ್ಯಾಂಕ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕಾಗಿ ಕರ್ಣಾಟಕ ಬ್ಯಾಂಕ್ ಪ್ರತಿಷ್ಟಿತ ‘ಇಟಿ ನೌ ಬಿಎಫ್‌ಎಸ್‌ಐ (ಬ್ಯಾಂಕಿಂಗ್ ಮತ್ತು ವಿಮಾ ಸೇವೆ)’ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಮುಂಬೈಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಾಜಿ ಎಂಡಿ ನರೇಂದ್ರ ಎಂ. ಅವರು ಕರ್ಣಾಟಕ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಭಟ್ ಬಿ.ಕೆ. ಅವರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿದರು.

ಬ್ಯಾಂಕಿನ ಡಿಜಿಎಂಗಳಾದ ರವೀಂದ್ರನಾಥ್ ಹಂದೆ, ವೆಂಕಟಕೃಷ್ಣ ಭಟ್ ಹಾಗೂ ಸತೀಶ್ ಶೆಟ್ಟಿ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News