ಮಾ. 3: ಪಟ್ರಮೆಗೆ ಅಂತಾರಾಷ್ಟ್ರೀಯ ವಾಗ್ಮಿ ಖಲೀಲ್ ಹುದವಿ
Update: 2018-03-02 21:24 IST
ಬೆಳ್ತಂಗಡಿ, ಮಾ. 2: ಮುಹಿಯುದ್ದೀನ್ ಜುಮಾ ಮಸೀದಿ ಪಟ್ರಮೆ, ಬೆಳ್ತಂಗಡಿ ಇದರ ವಠಾರದಲ್ಲಿ ಸೈಯದ್ ಅಬ್ದುಲ್ ಖಾದರ್ ಮಸ್ತಾನ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಊರೂಸ್ ಕಾರ್ಯಕ್ರಮ ಹಾಗು ಸ್ವಲಾತ್ ವಾರ್ಷಿಕೋತ್ಸವ ಮಾ.3 ರಂದು ಸಂಜೆ 7 ಗಂಟೆಗೆ ಪಟ್ರಮೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಸ್ವಲಾತ್ ನೇತೃತ್ವವನ್ನು ಅಸೈಯದ್ ಝೈನುಲ್ ಆಬಿದೀನ್ ಜಿಫ್ರಿ ಮುತ್ತುಕೋಯ ತಂಙಲ್ ಪೋಸೋಟ್ ವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ವಾಗ್ಮಿ ಖಲೀಲ್ ಹುದವಿ ಕಾಸರಗೋಡು ಮುಖ್ಯ ಭಾಷಣ ಮಾಡಲಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ, ಸಾದಾತುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.