×
Ad

ಮಂಗಳೂರು: ಹಲವು ಪ್ರಕರಣಗಳಲ್ಲಿ ಶಾಮೀಲು ಆರೋಪ; ಇಬ್ಬರ ವಿರುದ್ಧ ಗೂಂಡಾ ಕಾಯ್ದೆ

Update: 2018-03-02 22:13 IST

ಮಂಗಳೂರು, ಮಾ. 2: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಶಾಮಿಲಾಗಿದ್ದ ಆರೋಪದಲ್ಲಿ ಇಬ್ಬರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ಹೊರಡಿಸಿದ್ದಾರೆ.

ಮೂಡುಬಿದಿರೆಯ ಧರೆಗುಡ್ಡ ನಿವಾಸಿ ರೌಡಿ ಸುಮಿತ್‌ರಾಜ್ (29) ಮತ್ತು ಕುದ್ರೋಳಿ ನಿವಾಸಿ ಅಬ್ದುಲ್ ರಹೀಂ ಯಾನೆ ಅಬ್ದುಲ್ ರಹ್ಮಾನ್ (30) ಅವರನ್ನು ಬಂಧಿಸಲಾಗಿದ್ದು, ಇವರಿಬ್ಬರನ್ನು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಹಸ್ತಾಂತರಿಸಲಾಗಿದೆ.

ಸಮಿತ್‌ರಾಜ್ ವಿರುದ್ಧ ಅತ್ಯಾಚಾರ, ಕೊಲೆಯತ್ನ, ದೊಂಬಿ ಸಹಿತ 13ಕ್ಕೂ ಹೆಚ್ಚು ಪ್ರಕರಣಗಳಿವೆ. ಅಬ್ದುಲ್ ರಹೀಂ ಯಾನೆ ಅಬ್ದುಲ್ ರಹಿಮಾನ್ ವಿರುದ್ಧ 8 ಪ್ರಕರಣ ದಾಖಲಾಗಿದೆ.

ಆರೋಪಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News