×
Ad

ವಿವಿಧ ಇಲಾಖೆಗಳಿಂದ ನಿಗದಿತ ಗುರಿ ಸಾಧನೆಗೆ ಕ್ರಮ: ಕಾಪಶಿ

Update: 2018-03-02 22:45 IST

ಉಡುಪಿ, ಮಾ.2: ತೆರಿಗೆ ಪರಿಷ್ಕರಣೆ ಅನುಷ್ಠಾನ ಮತ್ತು ಸಂಗ್ರಹಕ್ಕೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಸಭೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು. ಜಿಪಂ ಅಧ್ಯಕ್ಷ ದಿನಕರ ಬಾಬು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಳೆದ ಸಾಲಿನಲ್ಲಿ ಸಂಗ್ರಹಿಸಿದ ತೆರಿಗೆ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿ ಗುರಿ ಸಾಧಿಸಿ ಎಂದವರು ಹೇಳಿದರು. ಆರ್‌ಜಿಸಿವೈ (ರಾಜೀವ್‌ಗಾಂಧಿ ಚೈತನ್ಯ ಯೋಜನೆ) ಮತ್ತು ಎನ್‌ಆರ್‌ಎಲ್‌ಎಂ ಯೋಜನೆ ಪ್ರಗತಿಯಲ್ಲೂ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಯೋಜನಾ ನಿರ್ದೇಶಕಿ ನಯನಾ ಸಭೆಯ ಗಮನಸೆಳೆದಿದ್ದು, ಯೋಜನೆಗಳ ಬಗ್ಗೆ ಅರಿತು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಸಿಇಒ ಎಚ್ಚರಿಕೆ ನೀಡಿದರು. ಯೋಜನೆಗಳ ಸಂಬಂಧ ಕರೆದಿರುವ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಯೋಜನೆ ಅನುಷ್ಠಾ ಮತ್ತು ಪ್ರಗತಿ ದಾಖಲಿಸಿ ಎಂದರು.

ಎಲ್ಲಾ ಇಲಾಖೆಗಳು ವರ್ಷಾಂತ್ಯಕ್ಕೆ ನಿಗದಿತ ಗುರಿಯನ್ನು ಸಾಧಿಸಿದ ಬಗ್ಗೆ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಪರಿಶೀಲನೆ ನಡೆಸಿದರು. ಜನಪರ ಯೋಜನೆಗಳಿಗೆ ಮಂಜೂರಾದ ಅನುದಾನ, ನಿರುಪಯುಕ್ತಗೊಳ್ಳ ದಂತೆ ಎಚ್ಚರಿಕೆ ವಹಿಸುವಂತೆ ಅವರು ಅಧಿಕಾರಿಗಳಿಗೆ ಹೇಳಿದರು.

ಎಲ್ಲಾ ಇಲಾಖೆಗಳು ವರ್ಷಾಂತ್ಯಕ್ಕೆ ನಿಗದಿತ ಗುರಿಯನ್ನು ಸಾಧಿಸಿದ ಬಗ್ಗೆ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಪರಿಶೀಲನೆ ನಡೆಸಿದರು. ಜನಪರ ಯೋಜನೆಗಳಿಗೆ ಮಂಜೂರಾದ ಅನುದಾನ, ನಿರುಪಯುಕ್ತಗೊಳ್ಳ ದಂತೆ ಎಚ್ಚರಿಕೆ ವಹಿಸುವಂತೆ ಅವರು ಅಧಿಕಾರಿಗಳಿಗೆ ಹೇಳಿದರು. ಕಳೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಪ್ರಸ್ತಾಪಿಸಿದ ಬಟ್ಟೆಕುದ್ರು ಗ್ರಾಪಂಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಕ್ರಮಕೈಗೊಂಡಿದ್ದು, ಫೆ.1ರಿಂದಲೇ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಕಾರ್ಯಪಾಲಕ ಇಂಜಿನಿಯರ್ ರಾಜು ಸಭೆಗೆ ತಿಳಿಸಿದರು.

ಬಾಬು ಶೆಟ್ಟಿ ಮಾತನಾಡಿ, ತುರ್ತು ಕುಡಿಯುವ ನೀರು ಪೂರೈಕೆ ಯೋಜನೆ ಯಡಿ ಯಶಸ್ವಿಯಾಗಿ ನೀರು ಪೂರೈಸಲು ಹೊಸ ಪೈಪ್‌ಲೈನ್ ಅಳವಡಿಸುವ ಅಗತ್ಯವಿದೆ ಎಂದರು.ಕುಂದಾಪುರ ವ್ಯಾಪ್ತಿಯಲ್ಲಿ ರಸ್ತೆ ತುಂಬ ಭಿತ್ತಿಪತ್ರಗಳು ರಾರಾಜಿಸುತ್ತಿದ್ದು ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಪಂಗೆ ಶುಲ್ಕ ಪಾವತಿ ಯಾಗಿಲ್ಲ. ಸಂಬಂಧಪಟ್ಟ ಗ್ರಾಪಂಗಳು ಕಟ್ಟುನಿಟ್ಟಾಗಿ ಶುಲ್ಕ ಮತ್ತು ಅನುಮತಿ ಪಡೆಯಬೇೆಂದು ಒತ್ತಾಯಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ನಾಡದೋಣಿ ಮೀನುಗಾರರಿಗೆ ಬಾಕಿ ಇರುವ ಡಿಸೆಂಬರ್ ಮತ್ತು ಜನವರಿ ತಿಂಗಳ ಸೀಮೆಎಣ್ಣೆ ಬಿಡುಗಡೆ ಮಾಡದೆ ಫೆಬ್ರವರಿ ತಿಂಗಳ ಸೀಮೆಎಣ್ಣೆ ಬಿಡುಗಡೆ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷ ದಿನಕರ ಬಾಬು ಇದಕ್ಕೆ ದನಿಗೂಡಿಸಿ ಸೀಮೆಎಣ್ಣೆ ಬಿಡುಗಡೆ ಮಾಡಿದ ಮಾಹಿತಿಯನ್ನು ಸಮಗ್ರವಾಗಿ ನೀಡಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಮುದ್ರಾ ಯೋಜನೆಯಡಿ ಸಾಲ ನೀಡಲು ಜಾಮೀನು ಕೇಳಲಾಗುತ್ತಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಗಮನಸೆಳೆದ ಬಾಬು ಶೆಟ್ಟಿ, ಈ ಸಂಬಂಧ ಬ್ಯಾಂಕುಗಳು ಜನರಿಗೆ ಸರಿಯಾದ ಸೌಲ್ಯ ನೀಡಬೇಕೆಂದು ಅವರಿಗೆ ಸೂಚಿಸಿದರು. ಕಾವಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವ ಬಗೆ್ಗಯೂ ಬಾಬುಶೆಟ್ಟಿ ಗಮನ ಸೆಳೆದರು.

ಆದರ್ಶ ಗ್ರಾಮಕ್ಕೆ ಜಿಪಂ ಸದಸ್ಯರ ಅನುದಾನ: ಸಂಸದರ ಆದರ್ಶ ಗ್ರಾಮಕ್ಕೆ ಜಿಪಂ ಸದಸ್ಯರ ಅನುದಾನವನ್ನು ಬಳಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಬು ಶೆಟ್ಟಿ, ಸಂಸದರು ತಮ್ಮ ಆದರ್ಶ ಗ್ರಾಮಗಳಿಗೆ ಪ್ರತ್ಯೇಕ ಅನುದಾನ ತರುವಂತಾಗಬೇಕೆಂದರು. ಸಂಸದರ ಆದರ್ಶ ಗ್ರಾಮಕ್ಕೆ ಜಿಪಂ ಸದಸ್ಯರ ಅನುದಾನವನ್ನು ಬಳಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಬು ಶೆಟ್ಟಿ, ಸಂಸದರು ತಮ್ಮ ಆದರ್ಶ ಗ್ರಾಮಗಳಿಗೆ ಪ್ರತ್ಯೇಕ ಅನುದಾನ ತರುವಂತಾಗಬೇಕೆಂದರು. ತೋಟಗಾರಿಕೆ ಇಲಾಖೆಯ ಸೂಕ್ಷ್ಮ ನೀರಾವರಿ ಯೋಜನೆ, ಗಂಗಾಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಮುಖ್ಯ ಯೋಜನಾಧಿಕಾರಿಗಳು ಖಾತರಿಪಡಿಸಿಕೊಂಡರು. ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕೋಟ್ಯಾನ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

ತೋಟಗಾರಿಕೆ ಇಲಾಖೆಯ ಸೂಕ್ಷ್ಮ ನೀರಾವರಿ ಯೋಜನೆ, ಗಂಗಾಕಲ್ಯಾಣ ಯೋಜನೆ ಅನುಷ್ಠಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಮುಖ್ಯ ಯೋಜನಾಧಿಕಾರಿಗಳು ಖಾತರಿಪಡಿಸಿಕೊಂಡರು. ಸೆಯಲ್ಲಿಕೃಷಿಮತ್ತುಕೈಗಾರಿಕೆಸ್ಥಾಯಿಸಮಿತಿಅ್ಯಕ್ಷ ಉದಯಕೋಟ್ಯಾನ್, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News