×
Ad

ಭಟ್ಕಳ: ಆಧಾರ್ ಕಾರ್ಡ ಕೇಂದ್ರ ತೆರೆಯಲು ವೆಲ್ಫೇರ್ ಪಾರ್ಟಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Update: 2018-03-02 23:00 IST

ಭಟ್ಕಳ, ಮಾ. 2: ಇಲ್ಲಿನ ಪಟ್ಟಣ ವ್ಯಾಪ್ತಿಯಲ್ಲಿ ಹೊಸದಾಗಿ ಇನ್ನೊಂದು ಆಧಾರ ಕಾರ್ಡ ಸೆಂಟರ್‌ನ್ನು ತೆರೆಯುವ ಬಗ್ಗೆ ಅನುಮತಿಯನ್ನು ನೀಡಬೇಕೆಂದು ಇಲ್ಲಿನ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಾಲೂಕಾ ಘಟಕದಿಂದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನವಿಯಲ್ಲಿ ಸದ್ಯ ತಾಲೂಕಿನಲ್ಲಿ ಕೇವಲ ಒಂದು ಕಡೆಯಲ್ಲಿ ಮಾತ್ರ ಆಧಾರ್ ಕಾರ್ಡ ಸೆಂಟರ್ ಇದ್ದು ಈಗಿರುವ ಸೆಂಟರನಲ್ಲಿ ಯಾವತ್ತು ಜನ ಜಂಗುಳಿ ಇರುತ್ತಿವೆ. ದಿನನಿತ್ಯವೂ ಕೂಡಾ ನೂರಾರು ಜನರು ಸರದಿ ಸಾಲಿನಲ್ಲಿ ನಿಲ್ಲುವುದು ಸರ್ವೇ ಸಾಮಾನ್ಯವಾಗಿದ್ದು, ದೂರ ದೂರದಿಂದ ಬಂದವರೂ ಕೂಡಾ ವಾಪಸ್ಸು ಹೋಗಬೇಕಾಗಿದೆ. ಇದರಿಂದ ಜನರಿಗೆ ಆಧಾರ್ ಕಾರ್ಡ್ ಬಗ್ಗೆ ಜಿಗುಪ್ಸೆ ಹೊಂದುವಂತಾಗಿದ್ದು, ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ತೀರ್ವ ತೊಂದರೆಪಡುವಂತಾಗಿದೆ. ಜನಸಂಖ್ಯೆ ಹಾಗೂ ಆಧಾರ್ ಕಾರ್ಡಗಳಿಗಿರುವ ಬೇಡಿಕೆಗೆ ಅನುಗುಣವಾಗಿ ಇನ್ನು 3-4 ಸೆಂಟರಗಳನ್ನು ತೆರೆಯುವ ಅವಶ್ಯಕತೆ ಇದೆ. ಈ ಕುರಿತು ಜಿಲ್ಲಾಢಳಿತ ಈ ಬಗ್ಗೆ ಗಮನ ಹರಿಸಿ ಆಧಾರ್ ಸೆಂಟರ್ ಹೆಚ್ಚುವರಿಯಾಗಿ ಮಂಜೂರಿ ಮಾಡಿ ನಗರ, ಗ್ರಾಮೀಣ ಪ್ರದೇಶದಲ್ಲಿ ಸೆಂಟರ್ ತೆರೆಯಬೇಕೆಂದು ಮನವಿ ಸಲ್ಲಿಸಲಾಯಿತು.

ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಛೇರಿ ಶಿರಸೇದ್ದಾರ ಎಲ್.ಎ. ಭಟ್ಟ ಮನವಿಯನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಶೌಕತ್ ಖತೀಬ್, ಉಪಾಧ್ಯಕ್ಷ ಇಬ್ರಾಹಿಂ ಶೇಖ್, ಸದಸ್ಯರಾದ ಸಾದಿಕ್ ನವೇದ್, ಆಸೀಫ್ ಶೇಖ್, ಸೈಯ್ಯದ್ ಅಶ್ರಫ್ ಬರ್ಮಾವರ್, ಅಬ್ದುಲ್ ಜಬ್ಬಾರ್ ಅಸದಿ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News