ಮಾ.3ರಿಂದ ಸಾಲ್ಮರ ಎಪಿಎಂಸಿ ಬಳಿಯ ಮಸೀದಿಯಲ್ಲಿ ಮತ ಪ್ರಭಾಷಣ
ಪುತ್ತೂರು, ಮಾ. 2: ಸಾಲ್ಮರ ಎಪಿಎಂಸಿಯ ಬಳಿ ಇರುವ ಮಸ್ಜಿದುಲ್ ಮಜೀದ್‌ನಲ್ಲಿ ಕುರ್‌ಆನ್ ಪ್ರಭಾಷಕ ಕೇರಳದ ಪತ್ತನಾಪುರಂ ಹಾಫಿಲ್ ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿಯವರಿಂದ ಕಡಮಗಳ್ ಕಡಪ್ಪಾಡುಗಳ್ ಎಂಬ ವಿಷಯದಲ್ಲಿ ಮಾ.3 ಮತ್ತು 4ರಂದು ಮತ ಪ್ರಭಾಷಣ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ವಕ್ಫ್ ಸಮಿತಿ ಸದಸ್ಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ. 3ಕ್ಕೆ ರಾತ್ರಿ ಸಾಲ್ಮರ ಸೈಯದ್‌ಮಲೆ ಮಸೀದಿಯ ಮುಹಮ್ಮದ್ ತಂಙಳ್ ದುವಾ ನೆರವೇರಿಸಲಿದ್ದಾರೆ. ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಯು ಅಬ್ದುಲ್ಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುದರ್ರಿಸ್ ಅಹ್ಮದ್ ಪೂಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಮತಪ್ರಭಾಷಣ ನಡೆಯಲಿದೆ.
ಮಾ.4ರಂದು ರಾತ್ರಿ ಓಲೆಮಂಡೋವ ಮುದರ್ರಿಸ್ ಅಸ್ಸಯ್ಯದ್ ಸೈಯದಲವಿ ತಂಙಳ್ ದುವಾ ನೆರವೇರಿಸಲಿದ್ದಾರೆ. ಮುಸ್ಲಿಂ ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಇಬ್ರಾಹಿಂ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಮತಪ್ರಭಾಷಣ ನಡೆಯಲಿದೆ. ಸಮಾರಭಕ್ಕೆ ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಸ್ಜಿದುಲ್ ಮಜೀದ್‌ನ ಅಧ್ಯಕ್ಷ ಯಹ್ಯಾ ಹುಸೈನ್ ಹಿಟ್ಲರ್, ನಿಕಟಪೂರ್ವ ಸದಸ್ಯ ಹಮೀದ್ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ಉದ್ಯಮಿ ಹಂಝತ್ ಖಾಸಿಂ, ಅನ್ಸಾರುದ್ದೀನ್ ಜಮಾಅತ್‌ನ ಸದಸ್ಯ ಇಸ್ಮಾಯಿಲ್ ಸಾಲ್ಮರ ಉಪಸ್ಥಿತರಿದ್ದರು.