ಬಂದೂಕು, 100 ಗುಂಡುಗಳ ಜೊತೆ ಯುವಕನ ಬಂಧನ

Update: 2018-03-02 17:33 GMT

ರೌಲೆಟ್ (ಟೆಕ್ಸಾಸ್), ಮಾ. 2: ಅಮೆರಿಕದ ಟೆಕ್ಸಾಸ್ ರಾಜ್ಯದ ರೌಲೆಟ್ ನಗರದ ಹೈಸ್ಕೂಲೊಂದರಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದ ವೇಳೆ, ಹೊರಗೆ ಸೆಮಿ ಆಟೊಮ್ಯಾಟಿಕ್ ರೈಫಲ್ ಮತ್ತು 100 ಸುತ್ತು ಮದ್ದುಗುಂಡುಗಳೊಂದಿಗೆ ಕಾರಿನಲ್ಲಿ ಕುಳಿತಿದ್ದ ಯುವಕನೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

17 ವರ್ಷದ ಡೀಗೊ ಹೊರ್ಟ ಎಂಬವನನ್ನು ರೌಲೆಟ್ ಪೊಲೀಸರು ಮಂಗಳವಾರ ರಾತ್ರಿ ಮಾದಕ ದ್ರವ್ಯ ಸೇವನೆ ಮತ್ತು ಶಸ್ತ್ರಗಳನ್ನು ಹೊಂದಿದ ಆರೋಪದಲ್ಲಿ ವಶಕ್ಕೆ ತೆಗೆದುಕೊಂಡಿದ್ದರು.

 ರೌಲೆಟ್ ಹೈಸ್ಕೂಲ್ ಬಳಿ ಮತ್ತು ನಗರದ ಸಮುದಾಯ ಸೇವಾ ಕೇಂದ್ರದ ಬಳಿ ಎರಡು ಕ್ರೀಡಾಕೂಟಗಳು ನಡೆಯುತ್ತಿದ್ದವು. ಅಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸ್ ಅಧಿಕಾರಿ ಕ್ರಝ್ ಹರ್ನಾಂಡಿಸ್‌ರ ಕಣ್ಣಿಗೆ ಆರೋಪಿ ಬಿದ್ದನು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.

‘‘ಆತನನ್ನು ಮುಂಚಿತವಾಗಿಯೇ ನಮ್ಮ ಪೊಲೀಸ್ ಅಧಿಕಾರಿಯೊಬ್ಬರು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ನಮಗೆ ಸಂತೋಷವಾಗಿದೆ. ಅವನ ಬಳಿ ಬಂದೂಕು ಇತ್ತು, ಮದ್ದುಗುಂಡುಗಳು ಇದ್ದವು ಹಾಗೂ ಮುಖವಾಡಗಳಿದ್ದವು. ಅದರ ಪರಿಣಾಮ ಭೀಕರವಾಗಲಿತ್ತು. ಅದೇನಿದ್ದರೂ ನಾವೀಗ ತಡೆದಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News