ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ಹಾಜಿ ಗುಲಾಂ ಮೊಹಮ್ಮದ್
Update: 2018-03-02 23:37 IST
ಪಡುಬಿದ್ರೆ, ಮಾ. 2: ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಸಮಿತಿಯ ಉಪಾಧ್ಯಕ್ಷರಾಗಿ ಹಾಜಿ ಗುಲಾಂ ಮೊಹಮ್ಮದ್ ಹೆಜಮಾಡಿ ಆಯ್ಕೆಯಾಗಿದ್ದಾರೆ.
ಟೋಲ್‌ಗೇಟ್ ವಿರೋಧಿ ಸಮಿತಿಯ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅವರನ್ನು ಐವನ್ ಡಿಸೋಜ ಇವರ ಶಿಫಾರಸಿನ ಮೇರೆಗೆ ರಾಜ್ಯ ಕೆಪಿಸಿಸಿ ಸಮಿತಿ ಅಧ್ಯಕ್ಷ ವೈ. ಸೈಯದ್ ಹಮ್ಮದ್ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.