ಅಡಿಕೆ ಬೆಳೆಗಾರರ ರಕ್ಷಣೆಗೆ ಕ್ಯಾಂಪ್ಕೋ ಬದ್ಧ: ಎಸ್.ಆರ್. ಸತೀಶ್ಚಂದ್ರ
ಮಂಗಳೂರು, ಮಾ.2: ಅಡಿಕೆ ಹಾನಿಕಾರಕ ಎಂದು ಕೇಂದ್ರ ಸರಕಾರ ಸಂಸತ್‌ಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಈ ಕುರಿತ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಮಾರ್ಚ್ ಎರಡನೇ ವಾರದಲ್ಲಿ ಅಡಕೆ ಕುರಿತ ಸಭೆ ಕರೆಯುವ ಬಗ್ಗೆ ಪ್ರಧಾನಮಂತ್ರಿ ಹಾಗೂ ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲಘಿ. ಅಡಕೆ ಬೆಳೆಗಾರರ ರಕ್ಷಣೆಗೆ ಕ್ಯಾಂಪ್ಕೋ ಬದ್ಧವಾಗಿದೆ ಎಂದವರು ಹೇಳಿದರು.
ಅಡಿಕೆಯ ಐಎಸ್‌ಒ ಗುಣಮಟ್ಟದ ಮಾನದಂಡಕ್ಕಾಗಿ ಮಾ.16ರಂದು ದೆಹಲಿಯಲ್ಲಿ ಸಭೆ ನಡೆಯಲಿದೆ. ಬಳಿಕ ಅಡಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಮಾನದಂಡ ಲಭಿಸಲಿದೆ. ಕ್ಯಾಂಪ್ಕೊ ಬ್ರಾಂಡ್‌ನಲ್ಲಿ ಒಂದು ಕಿಲೋ ಪ್ಯಾಕ್‌ನ ಸಣ್ಣ ಅಡಿಕೆಯನ್ನು ಉತ್ತರ ಭಾರತಕ್ಕೆ ಕಳುಹಿಸಲಾಗುತ್ತಿದೆ. ಕಳೆದ 8 ತಿಂಗಳಿಂದ ಅಡಿಕೆ ರವಾನೆಯಾಗುತ್ತಿದ್ದು, ಅಹಮದಾಬಾದ್‌ಗೆ 150 ಟನ್ ಅಡಿಕೆ ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶಕ್ಕೆ ಮತ್ತೆ 150 ಟನ್ ಅಡಿಕೆ ರಫ್ತು ಮಾಡಲಾಗುವುದು. ಹೊಸ ಅಡಕೆಗೆ ಉತ್ತರ ಭಾರತದಿಂದ ಸಾಕಷ್ಟು ಬೇಡಿಕೆ ಬಂದಿದೆ ಎಂದವರು ಅವರು ಹೇಳಿದರು.
ದೆಹಲಿಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಹು ಆ್ಯಂಡ್ ಅಗ್ರಿಕಲ್ಚರ್‌ನಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಸುರೇಶ ಪ್ರಭು ಅವರು ನಿವೇದನ್ ನೆಂಪೆ ಅವರಿಗೆ ಕೇಂದ್ರ ಸರಕಾರದ ಆಗ್ರೋ ಹುಡ್ ಸ್ಟಾರ್ಟ್ ಅಪ್ ಪುರಸ್ಕಾರ ಪ್ರದಾನ ಮಾಡಿದ್ದಾರೆ ಎಂದು ಸತೀಶ್ಚಂದ್ರ ಹೇಳಿದರು.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ, ಕ್ಯಾನ್ಸರ್ ಕಾರಕ ಎಂಬಿತ್ಯಾದಿ ಗುಲ್ಲು ಹಬ್ಬುತ್ತಿರುವ ಈ ಸಂದರ್ಭದಲ್ಲಿ, ಅಡಿಕೆ ಅರೋಗ್ಯ ದಾಯಕ ವೆಂದು ಸಾಬೀತುಪಡಿಸುವ ಅರೇಕಾ ಟೀ, ಇಂದು ರಾಷ್ಟ್ರ ಮನ್ನಣೆಗೆ ಪಾತ್ರವಾಗುತ್ತಿದ್ದು, ಕೇಂದ್ರ ಸರಕಾರವೇ ಇದನ್ನು ಗುರುತಿಸಿ ಗೌರವಿಸುತ್ತಿದೆ. ಆದ್ದರಿಂದ ಅಡಕೆ ನಿಷೇಧ ಕುರಿತ ಗೊಂದಲಗಳಿಗೆ ಈ ಮೂಲಕ ತೆರೆ ಬೀಳುವ ಸಾಧ್ಯತೆ ಇದೆ ಎಂದವರು ತಿಳಿಸಿದರು.
ನಿವೇದನ್ ನೆಂಪೆ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಮ್ಯಾನ್ಯಿಾಕ್ಟುರಿಂಗ್ ಅಂಡ್ ಮ್ಯಾನೇಜ್ಮೆಂಟ್ ಟೆಕ್ನೋಲೊಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕೃಷಿ ಸಂಬಂಧಿಸಿದ ವೌಲ್ಯವರ್ಧಿತ ಕಂಪೆನಿ ಸ್ಥಾಪಿಸಿ ರೈತರು ಬೆಳೆಯುವ ಉತ್ಪನ್ನಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಡಕೆಯ ಔಷಧೀಯ ಗುಣಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ನಡೆದಿದ್ದರೂ ಅವುಗಳು ಬೆಳಕಿಗೆ ಬಾರದೆ ಅಪಪ್ರಚಾರಕ್ಕೆ ಇಂಬು ದೊರೆತಂತಾಗಿದೆ. ಈ ನಿಟ್ಟಿನಲ್ಲಿ ನಿವೇದನ್ ಅವರ ಪ್ರಯತ್ನ ಸುತ್ತ್ಯರ್ಹ ಎಂದು ಸತೀಶ್ಚಂದ್ರ ಹೇಳಿದರು.
ನಿವೇದನ್ ನೆಂಪೆ ಮಾತನಾಡಿ, ಅರೇಕಾ ಟೀ ಗೆ ನೆದರ್ಲಂಡ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಲೆಮನ್, ಜಿಂಜರ್ಸ್, ಮಿಂಟ್ ಮತ್ತು ತುಳಸಿ ಫ್ಲೇವರ್‌ಗಳ ಮೂಲಕ ಅರೇಕಾ ಟೀ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಔಷಧೀಯ ಗುಣ ಹೊಂದಿರುವ ಅಡಕೆ ಹಾನಿಕಾರಕವಾಗಲು ಸಾಧ್ಯವಿಲ್ಲ ಎಂದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ ಭಂಡಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಭಟ್ ಉಪಸ್ಥಿತರಿದ್ದರು.
ಅಡಿಕೆ ಚಹಾಕ್ಕೆ ರಾಷ್ಟ್ರೀಯ ಮನ್ನಣೆ
ಅಡಿಕೆ ಚಹಾ ಇಂದು ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ದೇಶದ ಪ್ರತಿಷ್ಠಿತ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆ್ ುಡ್ ಅಂಡ್ ಅಗ್ರಿಕಲ್ಚರ್ ಸಂಸ್ಥೆಯು ಅರೆಕಾ ಟೀಯನ್ನು ಈ ವರ್ಷದ ಉತತಿಮ ಅಗ್ರಿಕಲ್ಚರ್ ಸ್ಟಾರ್ಟಪ್ ಉತ್ಪನ್ನ ಎಂದು ಘೋಷಿಸಿದೆ. ಇದರ ಹಿಂದಿನ ರೂವಾರಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ನಿವಾಸಿ ನಿವೇದನ್ ನೆಂಪೆ. ಈತನ ಸಾಧನೆಗಾಗಿ ಬೆಸ್ಟ್ ಸ್ಟಾರ್ಟ್ ಅಪ್ ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ಸಂತಿ ಎಂದು ಸತೀಶ್ಚಂದ್ರ ಹೇಳಿದರು.