×
Ad

ಮಂಗಳೂರು: ಕ್ಯಾಂಪಸ್ ಫ್ರಂಟ್‌ನಿಂದ ಡಿಡಿಪಿಯುಗೆ ಮನವಿ

Update: 2018-03-02 23:44 IST

ಮಂಗಳೂರು, ಮಾ. 2: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುಫೀದಾ ರಹ್ಮಾನ್ ನೇತೃತ್ವದ ನಿಯೋಗವು ಪಿಯು ಮಂಡಳಿಯ ಉಪನಿರ್ದೇಶಕ ತಿಮ್ಮಯ್ಯ ಅವರನ್ನು ಭೇಟಿ ಮಾಡಿತು.

ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆಯ ನೆಪವೊಡ್ಡಿ ನಡೆಯುತ್ತಿರುವ ಕಿರುಕುಳವು ಜಿಲ್ಲೆಯಾದ್ಯಂತ ವರದಿಯಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.

ವಿದ್ಯಾರ್ಥಿಗಳ ಮೇಲೆ ವಿನಾಃ ಕಾರಣ ನಿರ್ಬಂಧ ಹೇರುತ್ತಿರುವ ಪರೀಕ್ಷಾ ಮೇಲ್ವಿಚಾರಕರು ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿತು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಲು ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ನಿಯೋಗದಲ್ಲಿ ಸದಸ್ಯೆ ಸುಹಾನಾ, ಶಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News