ರೌಡಿ ಶೀಟರ್ ನವೀನ್ ಡಿಸೋಜ ಕೊಲೆ: ಐವರಿಂದ ಕೃತ್ಯ; ಎಸ್ಪಿ
Update: 2018-03-02 23:45 IST
ಉಡುಪಿ, ಮಾ. 2: ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆ ಎಂಬಲ್ಲಿ ಫೆ.28ರಂದು ರಾತ್ರಿ ವೇಳೆ ನಡೆದ ರೌಡಿ ಶೀಟರ್ ನವೀನ್ ಡಿಸೋಜ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವುದಾಗಿ ತನಿಖೆ ಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ ನೇತೃತ್ವದಲ್ಲಿ ಪಡುಬಿದ್ರೆ ಎಸ್ಸೈ ಸತೀಶ್, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ಅವರ ಮೂರು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಆರೋಪಿಗಳ ಪತ್ತೆಗಾಗಿ ಬೇರೆ ಬೇರೆ ಕಡೆಗಳಿಗೆ ತೆರಳಿದೆ ಎಂದು ಅವರು ತಿಳಿಸಿದರು.