ಕಾಪು: ಕಾರು- ರಿಕ್ಷಾ ಮಧ್ಯೆ ಅಪಘಾತ
Update: 2018-03-04 17:07 IST
ಕಾಪು, ಮಾ. 4: ಇಲ್ಲಿಗೆ ಸಮೀಪದ ವಿದ್ಯಾನಿಕೇತನ ಶಾಲೆಯ ಎದುರಿನ ರಾ.ಹೆ.66ರಲ್ಲಿ ರವಿವಾರ ಸಂಜೆ 4:30ರ ಸುಮಾರಿಗೆ ರಿಕ್ಷಾ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ, ಪ್ರಯಾಣಿಕರು ಗಾಯಗೊಂಡಿದ್ದಾರೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಹಾಗು ರಿಕ್ಷಾ ನಡುವೆ ಅಪಘಾತ ಸಂಭವಿಸಿ, ನಿಯಂತ್ರಣ ತಪ್ಪಿದ ರಿಕ್ಷಾ ರಸ್ತೆಯಲ್ಲಿ ಉರುಳಿ ಬಿದ್ದು ನಜ್ಜುಗುಜ್ಜಾಗಿದೆ. ಘಟನೆಯಿಂದ ರಿಕ್ಷಾ ಹಾಗು ಕಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಅರಿತ ಕಾಪು ಠಾಣೆ ಪೊಲೀಸರು ಇದೀಗ ಘಟನಾ ಸ್ಥಳಕ್ಕೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ.