×
Ad

​ಬಿಜೆಪಿಯ ಸುರಕ್ಷತೆಗಾಗಿ ನಡೆಯುತ್ತಿರುವ ಯಾತ್ರೆ: ಸಚಿವ ಯು.ಟಿ.ಖಾದರ್‌

Update: 2018-03-04 19:41 IST

ಮಂಗಳೂರು, ಮಾ. 4: ಬಿಜೆಪಿ ನಡೆಸುತ್ತಿರುವ ಜನಸುರಕ್ಷಾ ಯಾತ್ರೆ ಅವರ ಪಕ್ಷದ ಸುರಕ್ಷತೆಗಾಗಿ ಮಾಡುತ್ತಿರುವ ಯಾತ್ರೆ ಹೊರತು ಜನರ ಸುರಕ್ಷತೆಗಾಗಿ ಮಾಡುತ್ತಿರುವ ಯಾತ್ರೆಯಲ್ಲ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಯಾತ್ರೆಗಳು ಸಾಮಾನ್ಯ. ಯಾವೂದೇ ಜಾತಿ, ಮತ, ಧರ್ಮಕ್ಕೆ ಸೇರಿದವರು ಸಾವಿಗೀಡಾದರೂ ಖಂಡನೀಯ, ಅನ್ನು ಜಾತಿ, ಧರ್ಮದಲ್ಲಿ ಪ್ರತ್ಯೇಕಿಸಿ ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಜಿಲ್ಲೆಯಲ್ಲಿ ಸಾವಿಗೀಡಾದ ಹರೀಶ್ ಪೂಜಾರಿ, ಬಶೀರ್, ವಿನಾಯಕ ಬಾಳಿಗರ ಬಗ್ಗೆ ಏಕೆ ಅವರ ಸುರಕ್ಷಾ ಯಾತ್ರೆಯಲ್ಲಿ ಮಾತನಾಡುವುದಿಲ್ಲ. ಇದು ಬಿಜೆಪಿಯನ್ನು ಉಳಿಸಲು ನಡೆಸುತ್ತಿರುವ ಯಾತ್ರೆಯಾಗಿದೆ ಎಂದು ಸಚಿವ ಖಾದರ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News