×
Ad

ಮಾ.9: ತುಳು ಕಾವ್ಯರೂಪಕ ಬಿಡುಗಡೆ

Update: 2018-03-04 19:55 IST

ಮಂಗಳೂರು, ಮಾ.4: ಭಕ್ತ ಕವಿ ಕುಮಾರವ್ಯಾಸ ವಿರಚಿತ ‘ಕರ್ನಾಟ ಭಾರತ ಕಥಾಮಂಜರಿ’ಯನ್ನು ಆಧರಿಸಿ ಹಿರಿಯ ಕವಿ ದಿ.ಕೆಲಿಂಜ ಸೀತಾರಾಮ ಆಳ್ವರು ಬರೆದ ‘ತುಳು ಕೆಲಿಂಜ ಭಾರತೊ’ ಮಹಾಕಾವ್ಯವನ್ನು ತುಳು ಸಾಹಿತ್ಯ ಅಕಾಡಮಿ ಪ್ರಕಟಿಸಿದ್ದು, ಇದರ ಪ್ರಪ್ರಥಮ ‘ವಾಚನ-ಪ್ರವಚನ ಮತ್ತು ರಂಗಪ್ರದರ್ಶನ’ವನ್ನೊಳಗೊಂಡ ‘ಕೆಲಿಂಜ ಭಾರತೊ: ನುಡಿ-ನಲಿಕೆ-ಸುಗಿಪು ಕೂಟೊ’ ಕಾರ್ಯಕ್ರಮವು ಮಾ.9ರಂದು ಅಪರಾಹ್ನ 2:30 ರಿಂದ ನಗರದ ಉರ್ವಾಸ್ಟೋರ್‌ನಲ್ಲಿರುವ ತುಳು ಅಕಾಡಮಿಯ ಸಿರಿಚಾವಡಿಯಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News