×
Ad

‘ಜೋಯಾಲುಕ್ಕಾಸ್’ನಲ್ಲಿ ಹೊಸ ಕೊಡುಗೆಗೆ ಚಾಲನೆ

Update: 2018-03-04 20:01 IST

ಮಂಗಳೂರು, ಮಾ.5: ನಗರದ ಫಳ್ನೀರ್ ರಸ್ತೆಯಲ್ಲಿರುವ ಚಿನ್ನ ಮತ್ತು ವಜ್ರಾಭರಣ ಮಳಿಗೆ ‘ಜೋಯಾಲುಕ್ಕಾಸ್’ನಲ್ಲಿ ರವಿವಾರ ಹೊಸ ಕೊಡುಗೆಗೆ ಚಾಲನೆ ನೀಡಲಾಯಿತು.

‘ಜೋಯಾಲುಕ್ಕಾಸ್’ನ ಗ್ರಾಹಕಿಯರಾದ ಐ.ವಿ.ಸಿಕ್ವೇರಾ ಮತ್ತು ಶುಭಲಕ್ಷ್ಮಿ ಅವರು ಹೊಸ ಕೊಡುಗೆಯ ಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭ ‘ಜೋಯಾಲುಕ್ಕಾಸ್’ನ ಗ್ರಾಹಕರಾದ ಜಯದೇವ್ ಕುಡ್ವ, ಝಾಹಿನ್, ಜಯಲಕ್ಷ್ಮೀ, ಬದ್ರುದ್ದೀನ್, ಮುಹಮ್ಮದ್ ಹಾರಿಸ್ ಅವರ ಹುಟ್ಟು ಹಬ್ಬ ಆಚರಿಸಲಾಯಿತು.

‘ಜೋಯಾಲುಕ್ಕಾಸ್’ನ ಮ್ಯಾನೇಜರ್ ಹರೀಶ್, ಸಹಾಯಕ ಮ್ಯಾನೇಜರ್ ವೀರೇಂದ್ರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಹೊಸ ಕೊಡುಗೆಯ ಅನ್ವಯ ಗ್ರಾಹಕರು ಮಾ.31ರವರೆಗೆ ಖರೀದಿಸಿದ ಚಿನ್ನಾಭರಣದಷ್ಟೇ ತೂಕದ ಬೆಳ್ಳಿಯನ್ನು ಪಡೆಯಬಹುದಾಗಿದೆ. ಅಲ್ಲದೆ, 50 ಸಾವಿರ ರೂ ಮತ್ತು ಅದಕ್ಕಿಂತ ಹೆಚ್ಚು ಮೌಲ್ಯದ ವಜ್ರ ಹಾಗೂ ಪೋಲ್ಕಿ ಆಭರಣಗಳ ಪ್ರತೀ ಖರೀದಿಯ ಮೇಲೆ 1 ಗ್ರಾಂ ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಬಹುದು. ಈ ಖರೀದಿಗೆ 1 ವರ್ಷದ ವಿಮೆ ಉಚಿತವಿರುತ್ತದೆ. ಅಲ್ಲದೆ ಜೀವಮಾನವಿಡೀ ಉಚಿತ ನಿರ್ವಹಣೆ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News