×
Ad

ಕುದ್ರೋಳಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ ಪ್ರಶಸ್ತಿ ಪುರಸ್ಕೃತ, ಹಾಕಿ ಪಟು ಸುನಿಲ್‌

Update: 2018-03-04 21:31 IST

ಮಂಗಳೂರು, ಮಾ.4: ಭಾರತದ ಹಾಕಿ ತಂಡದ ಮಾಜಿ ಉಪನಾಯಕ, ಅರ್ಜುನ ಪ್ರಶಸ್ತಿ ಪುರಸ್ಕೃತ ಕೊಡಗಿನ ಎಸ್.ವಿ. ಸುನಿಲ್ ಅವರು ಮಂಗಳೂರಿನ ನಿಶಾ ಅವರನ್ನು ರವಿವಾರ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜದ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ನಗರದ ಕೊಂಚಾಡಿಯ ತಾರಾನಾಥ ಹಾಗೂ ಸುನೀತಾ ದಂಪತಿಯ ಪುತ್ರಿ ನಿಶಾ ಅವರೊಂದಿಗೆ ಮೂರು ತಿಂಗಳ ಹಿಂದೆ ಸುನೀಲ್‌ಗೆ ನಿಶ್ಚಿತಾರ್ಥ ನಡೆದಿತ್ತು. ಈ ಸಂದರ್ಭ ಭಾರತ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್, ಆಟಗಾರರಾದ ಧೀರೇಂದ್ರ ಲಾಕ್ರಾ, ಲಲಿತ್ ಉಪಾಧ್ಯಾಯ, ಭರತ್ ಛಾತ್ರಿ, ತುಷಾರ್, ದೇವೇಂದರ್ ಮತ್ತಿತರರು ಪಾಲ್ಗೊಂಡಿದ್ದರು.

ಮಾ.5ರಂದು ಸುನೀಲ್-ನಿಶಾ ದಂಪತಿಯ ವಿವಾಹ ಸಮಾರಂಭದ ಆರತಕ್ಷತೆಯು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಹಾಕಿ ತಂಡದ ಆಟಗಾರರು, ಮಾಜಿ ಆಟಗಾರರಾದ ಅರ್ಜುನ್ ಹಾಲಪ್ಪ, ಧನರಾಜ್ ಪಿಳ್ಳೈ, ಎ.ಬಿ.ಸುಬ್ಬಯ್ಯ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News