ಮುಂದುವರಿದ ಸ್ವಚ್ಛ ಮಂಗಳೂರು ಅಭಿಯಾನ
Update: 2018-03-04 22:26 IST
ಮಂಗಳೂರು, ಮಾ.4: ರಾಮಕೃಷ್ಣ ಮಿಷನ್ ವತಿಯಿಂದ ನಡೆಯುವ ‘ಸ್ವಚ್ಛ ಮಂಗಳೂರು ಅಭಿಯಾನದ 4ನೆ ಹಂತದ 18ನೆ ವಾರದ ಶ್ರಮದಾನವು ರವಿವಾರ ನಗರದ ಕಾವೂರು ವೃತ್ತದಲ್ಲಿ ನಡೆಯಿತು.
ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಮಠದ ಪೀಠಾಧ್ಯಕ್ಷ ಧರ್ಮಪಾಲನಾಥ ಸ್ವಾಮೀಜಿ ಹಾಗೂ ಮಾಜಿ ಮೇಯರ್ ಹರಿನಾಥ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಚೆನ್ನೈ ರಾಮಕೃಷ್ಣ ಮಠದ ಬ್ರಹ್ಮಚಾರಿ ಮಾಧವ ಚೈತನ್ಯ , ಬ್ರಹ್ಮಚಾರಿ ಶಿವಕುಮಾರ್ ಉಪಸ್ಥಿತರಿದ್ದರು. ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಬಳಿಕ ಕಾರ್ಯಕರ್ತರು ಕಾವೂರು, ಮರಕಡ ಮತ್ತಿತರ ಕಡೆ ಶ್ರಮದಾನದಲ್ಲಿ ಪಾಲ್ಗೊಂಡರು.