ಕಲ್ಲೇಗ ಜಮಾಅತ್ ಸಂಗಮ: ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಕ್ರಮ
ಮಂಗಳೂರು,ಮಾ.4 : ಪುತ್ತೂರು ತಾಲೂಕಿನ ಕಲ್ಲೇಗ ಜುಮಾ ಮಸೀದಿಯ ಆಡಳಿತ ಕಮಿಟಿ ಹಾಗೂ ಎನ್‌ಆರ್‌ಐ (ಅನಿವಾಸಿ ಭಾರತೀಯರು)ಸಮಿತಿಗಳ ನೇತೃತ್ವದಲ್ಲಿ ಮಾ.4 ರಂದು ಮಸೀದಿಯ ವಠಾರದಲ್ಲಿ ಜಮಾಅತ್ ಸಂಗಮ -2018 ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಧಾರ್ಮಿಕ ವಿದ್ವಾಂಸರಾದ ಮಹಮ್ಮದ್ ಅಶ್ರಫ್ ಅಶ್ರಫಿ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಬಿ.ಎ. ಶುಕೂರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಉಸ್ಮಾನ್ ವಿ, ಎನ್‌ಆರ್‌ಐ ಪ್ರವಾಸಿಗರ ಸಂಚಾಲಕ ಕೆ.ಎಚ್. ಸಿದ್ದೀಕ್, ಕಲ್ಲೇಗ ಸಮುದಾಯ ಭವನದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ. ಮಹಮ್ಮದ್ ಕುಂಞಿ. ಕಲ್ಲೇಗ ಮಸೀದಿಯ ಗೌರವ ಅಧ್ಯಕ್ಷ ಕೆ.ಪಿ. ಮಹಮ್ಮದ್ ಹಾಜಿ, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ರಶೀದ್ ವಿಟ್ಲ. ಇಮ್ತಿಯಾರ್ ಮಂಗಳೂರು, ಸುನ್ನೀ ಟುಡೇಯ ಹನೀಫ್ ಪುತ್ತೂರು, ಹಿದಾಯ ಫೌಂಡೇಶನ್‌ನ ಹನೀಫ್ ಹಾಜಿ ಗೋಳ್ತಮಜಲು, ಹನೀಫ್ ಉದಯ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬೆಳಿಗ್ಗೆಯಿಂದ ಸಂಜೆಯ ತನಕ ನಡೆದ ಕಾರ್ಯಕ್ರಮದಲ್ಲಿ ಜಮಾಅತ್‌ನೊಂದಿಗೆ ಆತ್ಮೀಯ ಸಹಭಾಗಿತ್ವ ಏಕೆ? ಹೇಗೆ? ಎಂಬ ವಿಚಾರದಲ್ಲಿ ಗೂಡಿನ ಬಳಿ ಮಸೀದಿ ಖತೀಬ್ ಅಬೂಬಕ್ಕರ್ ರಿಯಾರ್ ರಹಮಾನಿ, ಪ್ರಸಕ್ತ ಸಮಾಜದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳು ವಿಚಾರದಲ್ಲಿ ಯುವ ಸಮಾವೇಶ ವಿಚಾರದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಮಹಮ್ಮದ್ ರಫೀಕ್ ಮಾಸ್ಟರ್, ಹೆತ್ತವರ ಜವಾಬ್ದಾರಿಗಳು ವಿಚಾರದಲ್ಲಿ ಕೂರ್ನಡ್ಕ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಇಸ್ಲಾಮಿನಲ್ಲಿ ಕುಟುಂಬ ಜೀವನ ವಿಚಾರದಲ್ಲಿ ತಳಿಪರಂಬ ಮಸೀದಿ ಮುದರ್ರಿಸ್ ಇಬ್ರಾಹಿಂ ಮುಸ್ಲಿಯಾರ್, ಮಹಿಳೆಯರಿಗೆ ಆರೋಗ್ಯ ವಿಚಾರದಲ್ಲಿ ಡಾ. ನಝೀರಾ ಬಾನು, ವಿದ್ಯಾರ್ಥಿಗಳ ಪ್ರೇರಣಾ ಶಿಬಿರದಲ್ಲಿ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಪುರುಷರಿಗೆ ನಡೆದ ರಸಪ್ರಶ್ನೆ ಕಾರ್ಯಕ್ರಮವನ್ನು ಅಬ್ದುಲ್ ರಝಾಕ್ ಅನಂತಾಡಿ ನಡೆಸಿದರು.