×
Ad

ಮಂಗಳೂರು: ಕೊಲೆ ಪ್ರಕರಣದ ಆರೋಪಿ ಸೆರೆ

Update: 2018-03-04 22:55 IST

ಮಂಗಳೂರು, ಮಾ.4: ನಗರದ ಪಡೀಲ್ ಬಳಿ ಶನಿವಾರ ತಡರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಸುರೇಶ್ ಕುಮಾರ್ (48) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಮದುವೆಯ ಮನಸ್ತಾಪದ ವಿಚಾರದಲ್ಲಿ ತಮಿಳುನಾಡು ಮೂಲದ ಸೆಲ್ವಮಣಿ (40)ಯನ್ನು ನಗರದ ಪಡೀಲ್‌ನಲ್ಲಿ ಸುರೇಶ್ ಕುಮಾರ್ ಕೊಲೆಗೈದಿದ್ದ.

ಸುರೇಶ್‌ನ ಸಂಬಂಧಿಯನ್ನು ಸೆಲ್ವಮಣಿ ಪ್ರೀತಿಸಿ ಮದುವೆಯಾಗಿದ್ದು, ಈ ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಮಾ.3ರಂದು ರಾತ್ರಿ 1:15ರ ವೇಳೆಗೆ ಪಡೀಲ್ ಐಡಿಯಲ್ ಟ್ರಾನ್ಸ್‌ಪೋರ್ಟ್ ಲಾರಿ ಯಾರ್ಡ್‌ನಲ್ಲಿ ಸೆಲ್ವಮಣಿ ಮತ್ತು ಪ್ಯಾಟ್ರಿಕ್ ಸುರೇಶ್ ಮಧ್ಯೆ ವಾಗ್ವಾದ ನಡೆದು ಕೊಲೆಯಲ್ಲಿ ಪರ್ಯಾವಸಾನಗೊಂಡಿತ್ತು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗೆ ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News