×
Ad

ಪುತ್ತೂರು: ಬೇಡಿಕೆ ಈಡೇರಿಕೆಗಾಗಿ ಮಲೆನಾಡು ಜನಹಿತ ರಕ್ಷಣ ವೇದಿಕೆ ಧರಣಿ

Update: 2018-03-05 23:51 IST

ಪುತ್ತೂರು, ಮಾ. 6: ಮಲೆನಾಡು ಜನಹಿತ ರಕ್ಷಣ ವೇದಿಕೆ ವತಿಯಿಂದ ಜನಸಾಮಾನ್ಯರ ಮತ್ತು ರೈತರ ಹಕ್ಕಿನ ರಕ್ಷಣೆಗಾಗಿ ಧರಣಿ ಸತ್ಯಾಗ್ರಹ ಪ್ರತಿ ತಿಂಗಳ ಪ್ರಥಮ ಸೋಮವಾರ ನಡೆಯುವ ಧರಣಿ ಫೆ.5 ರಂದು 4 ನೇ ಸೋಮವಾರ ಇಲ್ಲಿನ ಮಿನಿ ವಿಧಾನ ಸೌಧದ ಮುಂಭಾಗ ನಡೆಯಿತು.

ರೈತರ ಮತ್ತು ಜನಸಾಮಾನ್ಯರ ಸುಮಾರು 25 ಸಮಸ್ಯೆಗಳನ್ನು ಮುಂದಿಟ್ಟು, ಅವುಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಸೋಮವಾರ ನಡೆದ ಧರಣಿಯಲ್ಲಿ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಸದಸ್ಯರಾದ ಸೂರ್ಯನಾರಾಯಣ ರಾವ್ ಶಿಶಿಲ, ಸುರೇರ್ಶ ಪುದುಬೆಟ್ಟು, ಹೇಮಂತ್ ಪುದುಬೆಟ್ಟು, ಚಿದಾನಂದ ಕೊಲ್ಲಮೊಗ್ರು, ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.

ಬೇಡಿಕೆ ಈಡೇರುವ ತನಕ ಧರಣಿಯನ್ನು ನಿಲ್ಲಿಸಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸಲಾಗುವುದು ಎಂದು ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News