ರೈತರ ಕಡೆಗಣಿಸಿ ಉದ್ಯಮಿಗಳ ರಕ್ಷಣೆಗೆ ನಿಂತ ಮೋದಿ ಸರಕಾರ: ಅಣ್ಣಾ ಹಝಾರೆ ಕಿಡಿ
Update: 2018-03-06 16:55 IST
ಹಲ್ದವಾನಿ,ಮಾ.6: ದೇಶದಲ್ಲಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಮೋದಿ ಸರಕಾರ ಕಡೆಗಣಿಸಿ, ಉದ್ಯಮಿಗಳ ರಕ್ಷಣೆಗೆ ನಿಂತಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಆರೋಪಿಸಿದ್ದಾರೆ. ಸಾಮಾನ್ಯ ರೈತರನ್ನು ಕಡೆಗಣಿಸುವ ಕೇಂದ್ರ ಸರಕಾರ ಬೃಹತ್ ಉದ್ಯಮಿಗಳನ್ನು ರಕ್ಷಿಸುತ್ತಿದೆ ಎಂದ ಅವರು
ಸರಕಾರದ ಗಮನ ಜಿಎಸ್‍ಟಿ ಮತ್ತು ನೋಟು ನಿಷೇಧದಲ್ಲಿದೆ. ರೈತರ ಕಷ್ಟಗಳಲ್ಲಿಲ್ಲ. ಯಾಕೆ ಇಲ್ಲಿ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ?, ಈವರೆಗೆ ಎಷ್ಟು ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡರು ?ಎಂದು ಹಝಾರೆ ಪ್ರಶ್ನಿಸಿದರು.
ದೇಶದ ರೈತರ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಮಾರ್ಚ್ 23ರಿಂದ ಶಾಂತಿಯುತ ಪ್ರತಿಭಟನೆ ಆರಂಭಿಸುತ್ತಿರುವುದಾಗಿ ಹಝಾರೆ ತಿಳಿಸಿದರು.