ಓಮ್ನಿ, ಟಿಪ್ಪರ್ ಢಿಕ್ಕಿಯಾಗಿ 3 ಮಂದಿ ಸಾವು
Update: 2018-03-06 17:16 IST
ಕಣ್ಣೂರ್(ಕೇರಳ), ಮಾ.6: ಕಣ್ಣೂರಿನ ಚಾಲ ಎಂಬಲ್ಲಿ ಟಿಪ್ಪರ್ ಲಾರಿ, ಮಾರುತಿ ವ್ಯಾನ್‍ಢಿಕ್ಕಿಯಲ್ಲಿ ಮೂವರು ಮೃತಪಟ್ಟವರು ತಮಿಳುನಾಡು ನಿವಾಸಿಗಳು. ಇಂದು ಬೆಳಗ್ಗೆ ಆರುಗಂಟೆಗೆ ಮಾರುತಿ ಓಮ್ನಿ ವ್ಯಾನ್ ಟಿಪ್ಪರ್ ಲಾರಿಯ ಹಿಂಬದಿಗೆ ಢಿಕ್ಕಿಹೊಡೆದಿತ್ತು.
ಚಾಲ ಬೈಪಾಸ್‍ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಓಮ್ನಿ ವ್ಯಾನ್, ಟಿಪ್ಪರ್ ಲಾರಿಗೆ ಹಿಂಬದಿಗೆ ಢಿಕ್ಕಿಯಾಗಿದೆ. ಮೃತದೇಹಗಳನ್ನು ಕಣ್ಣೂರ್ ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ.