ನೆಹರೂ ಮೈದಾನ ತಲುಪಿದ 'ಮಂಗಳೂರು ಚಲೋ' ಜನ ಸುರಕ್ಷಾ ಯಾತ್ರೆ
Update: 2018-03-06 17:42 IST
ಮಂಗಳೂರು, ಮಾ.6: ನಗರದ ಕೇಂದ್ರ ಮೈದಾನದಲ್ಲಿ ಮಂಗಳವಾರ ನಡೆಯುವ 'ಮಂಗಳೂರು ಚಲೋ' ಜನಸುರಕ್ಷಾ ಯಾತ್ರೆ ನೆಹರೂ ಮೈದಾನಕ್ಕೆ ತಲುಪಿದೆ.
ಸಮಾರೋಪ ಮತ್ತು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಪ್ರಮುಖ ಭಾಷಣ ಮಾಡಲಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಿಂದ ಸಾಗಿಬಂದ ಯಾತ್ರೆಯಲ್ಲಿ ಸಂಸದರಾದ ನಳೀನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಮೊದಲಾದವರು ಉಪಸ್ಥಿತರಿದ್ದರು.