ಬಾಂಗ್ಲಾದೇಶಿ ಕೆಲಸಗಾರರಿಗೆ ನಿಷೇಧ ಹೇರಿದ ಕುವೈತ್
Update: 2018-03-06 21:30 IST
ದುಬೈ, ಮಾ. 6: ಬಾಂಗ್ಲಾದೇಶದ ಕೆಲಸಗಾರರಿಗೆ ವೀಸಾಗಳನ್ನು ನೀಡುವುದನ್ನು ನಿಲ್ಲಿಸುವಂತೆ ಸೂಚಿಸಿ ಕುವೈತ್‌ನ ಆಂತರಿಕ ಸಚಿವ ಶೇಖ್ ಖಾಲಿದ್ ಅಲ್-ಸಬಾ ಆದೇಶವೊಂದನ್ನು ಹೊರಡಿಸಿದ್ದಾರೆ ಎಂದು ಕುವೈತ್ ದೈನಿಕ ‘ಅಲ್-ಜರಿದಾ’ ವರದಿ ಮಾಡಿದೆ.
ದೇಶದಲ್ಲಿ ಬಾಂಗ್ಲಾದೇಶಿ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲವೊಂದು ಪತ್ರಿಕೆಗೆ ತಿಳಿಸಿದೆ.
ಕಾರ್ಮಿಕ ಮಾರುಕಟ್ಟೆಯಲ್ಲಿ ಸ್ಥಳೀಯರ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಲು ಇತರ ಕೊಲ್ಲಿ ದೇಶಗಳಂತೆ ಕುವೈತ್ ಕೂಡ ಪ್ರಯತ್ನಿಸುತ್ತಿದೆ.