ಜೆರುಸಲೇಮ್ ರಾಯಭಾರ ಕಚೇರಿ ಉದ್ಘಾಟನೆಗೆ ಟ್ರಂಪ್?

Update: 2018-03-06 16:35 GMT

ವಾಶಿಂಗ್ಟನ್, ಮಾ. 6: ಜೆರುಸಲೇಂನಲ್ಲಿ ಅಮೆರಿಕ ರಾಯಭಾರ ಕಚೇರಿಯ ಉದ್ಘಾಟನೆಗೆ ತಾನು ಇಸ್ರೇಲ್‌ಗೆ ಹೋಗುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಇಲ್ಲಿನ ಶ್ವೇತಭವನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮಾತುಕತೆಗಳನ್ನು ನಡೆಸಿದ ಬಳಿಕ ಓವಲ್ ಕಚೇರಿಯಲ್ಲಿ ಟ್ರಂಪ್ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ನೆತನ್ಯಾಹು ಉಪಸ್ಥಿತರಿದ್ದರು.

‘‘ಅಲ್ಲಿಗೆ ಹೋಗುವ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ. ಸಾಧ್ಯವಾದರೆ ನಾನು ಹೋಗುತ್ತೇನೆ’’ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜೆರುಸಲೇಮನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವುದಾಗಿ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ. ಆದರೆ, ಈ ಘೋಷಣೆಗೆ ಫೆಲೆಸ್ತೀನ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅದೂ ಅಲ್ಲದೆ, ಇಸ್ರೇಲ್-ಫೆಲೆಸ್ತೀನ್ ಶಾಂತಿ ಪ್ರಕ್ರಿಯೆಯ ಮೇಲೂ ಟ್ರಂಪ್‌ರ ಈ ನಿರ್ಧಾರ ವ್ಯತಿರಿಕ್ತ ಪರಿಣಾಮ ಬೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News