ವಿಮಾನದಿಂದ ಕೆಲವೇ ಕ್ಷಣಗಳಲ್ಲಿ 32 ಕೋಟಿ ರೂ. ಕಳವು!

Update: 2018-03-06 16:44 GMT

ಸಾವೊ ಪೌಲೊ (ಬ್ರೆಝಿಲ್), ಮಾ. 6: ಬ್ರೆಝಿಲ್‌ನಿಂದ ಸ್ವಿಟ್ಝರ್‌ಲ್ಯಾಂಡ್‌ಗೆ ವಿಮಾನದಲ್ಲಿ ಸಾಗಿಸಲಾಗುತ್ತಿದ್ದ 5 ಮಿಲಿಯ ಡಾಲರ್ (ಸುಮಾರು 32.50 ಕೋಟಿ ರೂಪಾಯಿ) ನಗದನ್ನು ಕಳ್ಳರ ಗುಂಪೊಂದು ಕದ್ದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ರವಿವಾರ ರಾತ್ರಿ ಸಾವೊ ಪೌಲೊದ ಸರಕು ವಿಮಾನ ನಿಲ್ದಾಣವೊಂದರಲ್ಲಿ ಕಳ್ಳರು ತಮ್ಮ ಚಾಣಾಕ್ಷತೆ ಪ್ರದರ್ಶಿಸಿದ್ದಾರೆ. ಕೇವಲ ನಿಮಿಷಗಳ ಅವಧಿಯಲ್ಲಿ ಕಳ್ಳತನ ಮುಕ್ತಾಯಗೊಂಡಿದೆ.

ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಕಳ್ಳರು ರನ್‌ವೇ ಭದ್ರತೆಯನ್ನು ನೋಡಿಕೊಳ್ಳುವ ಕಂಪೆನಿಯ ಲೋಗೊವನ್ನು ಹೋಲುವ ಸ್ಟಿಕ್ಕರ್ ಅಂಟಿಸಿದ್ದ ವ್ಯಾನೊಂದರಲ್ಲಿ ವಿರಕೊಪೊಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರವೇಶಿಸಿ ಲುಫ್ತಾನ್ಸ ವಿಮಾನದಿಂದ ಹಣ ಕದ್ದೊಯ್ದರು ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News