ಕೆಲವೇ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ ಚೀನಾದ ಪ್ರಥಮ ಬಾಹ್ಯಾಕಾಶ ನಿಲ್ದಾಣ

Update: 2018-03-06 16:49 GMT

ಬೀಜಿಂಗ್, ಮಾ. 6: ಚೀನಾದ ಪ್ರಥಮ ಬಾಹ್ಯಾಕಾಶ ನಿಲ್ದಾಣವು ಕೆಲವೇ ವಾರಗಳಲ್ಲಿ ಭೂಮಿಗೆ ಅಪ್ಪಳಿಸಲಿದೆ, ಆದರೆ 8.5 ಟನ್ ಭಾರದ ವಸ್ತುವು ನಿಖರವಾಗಿ ಎಲ್ಲಿ ಅಪ್ಪಳಿಸುತ್ತದೆ ಎಂಬುದನ್ನು ಊಹಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ತಿಳಿಸಿದೆ.

ಚೀನಾದ ಬಾಹ್ಯಾಕಾಶ ನಿಲ್ದಾಣ ‘ಟಿಯಾಂಗಾಂಗ್-1’ ಎಪ್ರಿಲ್ ಮೊದಲ ವಾರದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತದೆ ಎಂದು ಅಮೆರಿಕದ ಏರೋಸ್ಪೇಸ್ ಕಾರ್ಪೊರೇಶನ್ ಅಂದಾಜಿಸಿದೆ.

ನಿಲ್ದಾಣವು ಮಾರ್ಚ್ 24 ಮತ್ತು ಎಪ್ರಿಲ್ 19ರ ನಡುವಿನ ಅವಧಿಯಲ್ಲಿ ಭೂಮಿಗೆ ಅಪ್ಪಳಿಸಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ ಎಂದು ‘ಗಾರ್ಡಿಯನ್’ ವರದಿ ಮಾಡಿದೆ.

‘ಟಿಯಾಂಗಾಂಗ್-1’ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿರುವುದಾಗಿ ಚೀನಾ 2016ರಲ್ಲಿ ಒಪ್ಪಿಕೊಂಡಿತ್ತು. ಹಾಗಾಗಿ, ಅದರ ನಿಯಂತ್ರಿತ ಭೂವಾಪಸಾತಿ ಖಾತರಿಪಡಿಸಲು ಸಾಧ್ಯವಿಲ್ಲ ಎಂದಿದೆ.

ಬಾಹ್ಯಾಕಾಶ ನಿಲ್ದಾಣವನ್ನು 2011ರಲ್ಲಿ ಉಡಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News