ಕುಪ್ವಾರ: ಸೇನೆಯ ಶಿಬಿರದಲ್ಲಿ ಯೋಧ ಆತ್ಮಹತ್ಯೆ
Update: 2018-03-08 19:07 IST
ಶ್ರೀನಗರ, ಮಾ.8: ಸೇನೆಯ ಯೋಧನೋರ್ವ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಎರಡು ದಿನದಲ್ಲಿ ನಡೆದ ಯೋಧರ ಎರಡನೇ ಆತ್ಮಹತ್ಯೆ ಘಟನೆ ಇದಾಗಿದೆ.
18 ರಾಷ್ಟ್ರೀಯ ರೈಫಲ್ಸ್‌ನ ಯೋಧ, ರಾಜಸ್ತಾನ ಮೂಲದ ನಾಕ್ ಶಂಕರ್ ಸಿಂಗ್ ಕುಪ್ವಾರ ಜಿಲ್ಲೆಯ ವಾರ್ನೊವ್ ಪ್ರದೇಶದಲ್ಲಿರುವ ಸೇನೆಯ ಶಿಬಿರದಲ್ಲಿ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬುಧವಾರ 30 ರಾಷ್ಟ್ರೀಯ ದಳದ ಯೋಧ ಸಿಪಾಯ್ ಬೀರೇಂದರ್ ಸಿನ್ಹ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ .