×
Ad

ಕರ್ನಾಟಕದ ಇಬ್ಬರು ಮಹಿಳೆಯರ ಸಹಿತ 30 ಮಂದಿಗೆ ‘ನಾರಿ ಶಕ್ತಿ ಪುರಸ್ಕಾರ್’ ಪ್ರದಾನ

Update: 2018-03-08 22:06 IST
ಉಮಾದೇವಿ ರೇವಣ್ಣ ನಾಗರಾಜ್

ಹೊಸದಿಲ್ಲಿ, ಮಾ. 8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಾರಿ ಶಕ್ತಿ ಪುರಸ್ಕಾರ್-2017 ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕದ ಉಮಾದೇವಿ ರೇವಣ್ಣ ನಾಗರಾಜ್ ಹಾಗೂ ಪುಷ್ಪಾ ಗಿರಿಮಾಜಿ ಸೇರಿದಂತೆ 30 ಮಂದಿ ಮಹಿಳೆಯರಿಗೆ ‘ನಾರಿ ಶಕ್ತಿ ಪುರಸ್ಕಾರ’ ಪ್ರದಾನಿಸಿದರು.

ದಿಲ್ಲಿ ಉಚ್ಚ ನ್ಯಾಯಾಲಯದ ಕಾರ್ಯಕಾರಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಕೂಡ ಈ ಗೌರವಾನ್ವಿತ ಪ್ರಶಸ್ತಿಯನ್ನು ರಾಷ್ಟ್ರಪತಿ ಅವರಿಂದ ಸ್ವೀಕರಿಸಿದರು. ಈ ಪ್ರಶಸ್ತಿಗೆ 30 ಮಹಿಳೆಯರು ಹಾಗೂ 9 ಸಂಸ್ಥೆಗಳು ಆಯ್ಕೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಮಲೆನಾಡ ಸಂಸ್ಥೆಗೂ ಪ್ರಶಸ್ತಿ

ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಮಲೆನಾಡು ವಲಯದಲ್ಲಿ ಮಹಿಳೆಯರೇ ನಡೆಸುತ್ತಿರುವ ಬೀಜ ಸಂರಕ್ಷಣಾ ಗುಂಪು ‘ವನಶ್ರೀ’ ತನ್ನ ಅತ್ಯುಚ್ಛ ಕೆಲಸಕ್ಕಾಗಿ ಇತರ ಸಂಸ್ಥೆಗಳೊಂದಿಗೆ ಈ ಪ್ರಶಸ್ತಿ ಪಡೆದುಕೊಂಡಿದೆ.

ಟೈಪಿಸ್ಟ್‌ನಿಂದ ಬಿಲಿಯರ್ಡ್ಸ್ ಚಾಂಪಿಯನ್‌ಗೆ

ಉಮಾದೇವಿ ರೇವಣ್ಣ ನಾಗರಾಜ್ ಅವರು 1989ರಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ತನ್ನ ವೃತ್ತಿಜೀವನ ಆರಂಭಿಸಿದರು. ಅನಂತರ ಅವರು ಬಿಲಿರ್ಡ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಪತ್ರಕರ್ತೆ ಪುಷ್ಪಾ ಗಿರಿಮಾಜಿ ಪುಷ್ಪಾ ಗಿರಿಮಾಜಿ ಗ್ರಾಹಕ ಹಕ್ಕುಗಳ ಬಗ್ಗೆ ವರದಿ ಮಾಡುವ ಪತ್ರಕರ್ತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News