×
Ad

ಮಹಿಳಾ ಸಬಲೀಕರಣಕ್ಕೆ ಸ್ವಯಂ ನಿರ್ಧಾರ ಅಗತ್ಯ: ಪ್ರಿಯಾಂಕ

Update: 2018-03-08 22:21 IST

ಉಡುಪಿ, ಮಾ.8: ಪ್ರಸಕ್ತ ಸನ್ನಿವೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಸರಕಾರ, ವ್ಯವಸ್ಥೆ, ಸಾಮಾಜಿಕ ಸಂಘಟನೆಗಳು ಸಾಕಷ್ಟು ಅವಕಾಶ ಸೃಷ್ಟಿಸಿವೆ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಮಹಿಳೆಯರಲ್ಲಿ ಸ್ವಾವಲಂಬಿ ಸಾಧಕರಾಗುವ ಬಗ್ಗೆ ಸ್ವಯಂ ಇಚ್ಛಾಶಕ್ತಿ ಇರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅಜ್ಜರಕಾಡಿನ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಘಟಕದ ವತಿ ಯಿಂದ ರೆಡ್‌ಕ್ರಾಸ್ ಭವನದಲ್ಲಿ ಗುರುವಾರ ಆಯೋಜಿಸಲಾದ ಅಂತಾ ರಾಷ್ಟ್ರೀಯ ಮಹಿಳಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉಡುಪಿ ಮಹಿಳೆಯರ ಸಂಖ್ಯೆ, ಸಾಕ್ಷರತೆ, ಉನ್ನತ ಶಿಕ್ಷಣ ಎಲ್ಲದರಲ್ಲೂ ಮುಂದಿದೆ ಎಂದ ಅವರು, ಸಬಲೀಕರಣವನ್ನು ಯಾರ ಮೇಲೂ ಬಲವಂತ ವಾಗಿ ಹೇರಲು ಸಾಧ್ಯವಿಲ್ಲ. ವ್ಯಕ್ತಿತ್ವ ವಿಕಸನ, ಮಹಿಳಾ ಅಭಿವೃದ್ಧಿಗೆ ಪೂರಕ ವಾತಾವರಣ ಉಡುಪಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇದ್ದು, ಸಮಾಜದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುವ ಕರ್ತವ್ಯವಿದೆ ಎಂದು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಿಯಾಂಕ ವೆುೀರಿ ಫ್ರಾನ್ಸಿಸ್ ಕಿವಿಮಾತು ಹೇಳಿದರು.

ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇದ್ದು, ಸಮಾಜದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುವ ಕರ್ತವ್ಯವಿದೆ ಎಂದು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಿವಿಮಾತು ಹೇಳಿದರು. ಸಮಾರಂಭದಲ್ಲಿ ವಿವಿಧ ಸಂಸ್ಥೆಗಳಿಂದ ವಿಶೇಷವಾಗಿ ಗುರುತಿಸಲ್ಪಟ್ಟ ಡಾ. ದಮಯಂತಿ ಕೃಷ್ಣ ಮೋಹನ್, ಪ್ರೇಮ ಮಾರ್ಗರೆಟ್ ಬೋರ್ಡೆ, ವಸಂತಿ ರಾವ್ ಕೊರಡ್ಕಲ್, ಶಕೀಲಾ ಮತ್ತು ಜಿಲ್ಲಾಧಿಾರಿ ಇವರನ್ನು ಸನ್ಮಾನಿಸ ಲಾಯಿತು.

ಸಮಾರಂದಲ್ಲಿ ವಿವಿ ಸಂಸ್ಥೆಗಳಿಂದ ವಿಶೇಷವಾಗಿ ಗುರುತಿಸಲ್ಪಟ್ಟ ಡಾ. ದಮಯಂತಿ ಕೃಷ್ಣ ಮೋಹನ್, ಪ್ರೇಮ ಮಾರ್ಗರೆಟ್ ಬೋರ್ಡೆ, ವಸಂತಿ ರಾವ್ ಕೊರಡ್ಕಲ್, ಶಕೀಲಾ ಮತ್ತು ಜಿಲ್ಲಾಧಿಕಾರಿ ಇವರನ್ನು ಸನ್ಮಾನಿಸ ಲಾಯಿತು. ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಡಾ.ಉಮೇಶ್ ಪ್ರಭು, ಬಸ್ರೂರು ರಾಜೀವ್ ಶೆಟ್ಟಿ, ಡಾ.ಅಶೋಕ್‌ಕುಮಾರ್, ಟಿ.ಚಂದ್ರಶೇಖರ್, ಬಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News