ಜುಗಾರಿ: 19 ಮಂದಿಯ ಬಂಧನ
ಕಾರ್ಕಳ, ಮಾ.8: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಎರಡು ಕಡೆಗಳಿಗೆ ದಾಳಿ ನಡೆಸಿದ ಪೊಲೀಸರು ಉಲಾಯಿ ಪಿದಾಯಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಒಟ್ಟು 19 ಮಂದಿಯನ್ನು ಬಂಧಿಸಿ, ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ನಂದಳಿಕೆ ಗ್ರಾಮದ ಜಂತ್ರಗುಡ್ಡೆ ಎಂಬಲ್ಲಿ ಮಾ.7ರಂದು ರಾತ್ರಿ 10ಗಂಟೆ ಸುಮಾರಿಗೆ ಕಟ್ಟಡದೊಳಗೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಶಿರ್ವದ ಟೈರಾನ್ (34), ಇಸಾಕ್ ಪಿಲಿಕ್ಸೃ್(52), ಮಹಮ್ಮದ್ ಆರೀಫ್ (43), ಮುದರಂಗಡಿ ಯ ಜಿತೇಸ್ ಪಿಲಾರ್(30), ನಿತೇಶ್ ಪೂಜಾರಿ(27), ಹೆಜಮಾಡಿಯ ಬಶೀರ್(35), ಪಾದೂರಿನ ಸಿಲ್ವಸ್ ಸ್ಟಾರ್(42), ಕಲ್ಯಾಣ ಪುರದ ವಿಜಯ್ (43), ಮಲ್ಪೆಯ ಚೇತನ(32), ಉದ್ಯಾವರದ ಕಿಶೋರ್ ಕುಮಾರ್(34), ಕಾರ್ಕಳದ ಸಂತೋಷ ಪೂಜಾರಿ(27), ತೆಳ್ಳಾರಿನ ಮನೋಜ್(27), ಬೆಳ್ಮಣಿನ ಸುಧಾಕರ(26), ಸುರೇಂದ್ರ(32) ಎಂಬವರನ್ನು ಕಾರ್ಕಳ ಎಎಸ್ಪಿ ಹೃಷಿಕೇಶ್ ಸೋನಾವಣೆ ನೇತೃತ್ವದಲ್ಲಿ ತಂಡ ಬಂಧಿಸಿದೆ. ಇವರಿಂದ 1,23,255ರೂ. ನಗದು, ಆಲ್ಟೋ 800 ಕಾರು, 14 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಲ್ಲೂರು ಗ್ರಾಮದ ಅಬ್ಬೆಂದರಬೆಟ್ಟು ಎಂಬಲ್ಲಿರುವ ಹಾಡಿಯಲ್ಲಿ ಮಾ.8 ರಂದು ಬೆಳಗಿನ ಜಾವ 3:30ರ ಸುಮಾರಿಗೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಲ್ಲೂರಿನ ಶಂಕರ ಮೊಯಿಲಿ(34), ಗಣೇಶ್(33), ಶಂಕರ(46), ವಿಜಯ (33), ಅಶೋಕ(23) ಎಂಬವರನ್ನು ಬಂಧಿಸಿ, 1765ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.