×
Ad

ಅಕ್ರಮ ಸ್ಪೋಟಕ ಬಳಸಿ ಗಣಿಗಾರಿಕೆ: ಮನೆಗೆ ಹಾನಿ

Update: 2018-03-08 22:24 IST

ಅಜೆಕಾರು, ಮಾ.8: ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದರಿಂದ ಮನೆಗಳಿಗೆ ಹಾನಿಯಾಗಿರುವ ಕುರಿತು ಕಡ್ತಲ ಗ್ರಾಮದ ದರ್ಬುಜೆ ನಿವಾಸಿ ರಾಜರಾಮ ಯೆಡಪಡಿತಾಯ(63) ನೀಡಿರುವ ದೂರಿ ನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜರಾಮ ಯೆಡಪಡಿತಾಯ ಅವರ ಜಾಗದಲ್ಲಿ ಜನಾರ್ದನ ಬೆಳಿರಾಯ ಮತ್ತು ಅವರ ಪತ್ನಿ ಯಮುನ ಬೆಳಿರಾಯ ಅಕ್ರಮವಾಗಿ ಸ್ಪೋಟಕವನ್ನು ಬಳಸಿ ಬಂಡೆಯನ್ನು ಸ್ಪೋಟಿಸಿದ್ದು, ಇದರಿಂದ ರಾಜರಾಮರವರ ವಾಸ್ತವ್ಯದ ಮನೆಗೆ ತೀವ್ರ ಹಾನಿ ಉಂಟಾಗಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಪ್ರಶ್ನಿಸಿದಕ್ಕೆ ಅನುಮತಿ ಇರುವುದಾಗಿ ಅವರು ತಿಳಿಸಿದ್ದಾರೆ. ಪಿಡಿಓ ಅವರಲ್ಲಿ ಪರಿಶೀಲಿಸಿದಾಗ ಇದಕ್ಕೆ ಯಾವುದೇ ಅನುಮತಿ ಇಲ್ಲದಿರುವುದು ಕಂಡು ಬಂದಿದೆ. ನಂತರ ಯಮುನ ಇತರೊಂದಿಗೆ ಮನೆಗೆ ಬಂದು ರಾಜ ರಾಮ್ ಅವರ ಕುಟುಂಬಕ್ಕೆ ಅವಮಾನ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನಂತರ ಮಾ.5ರಂದು ಮತ್ತೆ ಬಂಡೆ ಸ್ಫೋಟ ನಡೆಸಿದ್ದು, ಕಾನೂನು ಬಾಹಿರವಾಗಿ ಸ್ಪೋಟಕ ಬಳಸಿ ಬಂಡೆ ಸ್ಪೋಟಿಸುವವರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ರಾಜರಾಮ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News