×
Ad

ಕೋಟೆಕಾರ್: ಸರ್ಕಾರಿ ಬಸ್ ನಿರ್ವಾಹಕನಿಂದ ವಿದ್ಯಾರ್ಥಿಗೆ ಹಲ್ಲೆ

Update: 2018-03-08 22:42 IST

ಉಳ್ಳಾಲ, ಮಾ. 8: ಸರ್ಕಾರಿ ಬಸ್ ನಿರ್ವಾಹಕನೋರ್ವ ವಿದ್ಯಾರ್ಥಿಗೆ ಹಲ್ಲೆ ಮಾಡಿ, ಬಸ್ಸಿನಿಂದ ಕೆಳಗಿಳಿಸಿದ ಘಟನೆ ಕೋಟೆಕಾರ್ ಸಮೀಪದ ಬೀರಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಕೆ.ಸಿ.ರೋಡ್ ನಿವಾಸಿ ಅಬ್ದುಲ್ ರಹ್ಮಾನ್ (19) ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ರಹ್ಮಾನ್ ಗುರುವಾರ ಸಂಜೆ ಕೇರಳದ ಸರ್ಕಾರಿ ಬಸ್ಸು ಅನ್ನು ಮಂಗಳೂರಿನಲ್ಲಿ ಹತ್ತಿದ್ದರು. ನಿರ್ವಾಹಕನ ಸೀಟು ಖಾಲಿಯಿದ್ದ ಕಾರಣ ಅದರಲ್ಲಿ ಕುಳಿತಿದ್ದು, ಇದನ್ನು ಬೀರಿಯಲ್ಲಿ ಕಂಡ ನಿರ್ವಾಹಕ ತಗಾದೆ ತೆಗೆದಿದ್ದಾರೆ ಎನ್ನಲಾಗಿದ್ದು, ಮುಂದಿನ ನಿಲ್ದಾಣ ಕೆ.ಸಿ.ರೋಡ್‌ನಲ್ಲಿ ಇಳಿಯುವುದಾಗಿ ತಿಳಿಸಿದರೂ ನಿರ್ವಾಹಕ ಹಲ್ಲೆ ನಡೆಸಿ ಬೀರಿಯಲ್ಲೇ ಇಳಿಸಿ ಹೋಗಿದ್ದಾನೆ ಎಂದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News