ಕೋಡಿ: ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕೋಡಿ, ಮಾ. 8: ಇಂದಿನ ಆಧುನಿಕ ಯುಗದಲ್ಲಿ ಬದುಕಿನ ಕುರಿತು ಮಹತ್ವಾಕಾಂಕ್ಷೆ ಮೈಗೂಡಿಸಿಕೊಳ್ಳುವುದು ಪ್ರತಿಯೋರ್ವ ಸ್ತ್ರೀಯರ ಕರ್ತವ್ಯವಾಗಿದೆ. ಸ್ತ್ರೀಯರ ವೃತ್ತಿ ಬದುಕಿಗಿಂತ ಸಾಂಪ್ರದಾಯಿಕತೆ, ಸಾಂಸಾರಿಕತೆಗೆ ಸಮಾಜವು ಸ್ತೀಯರ ಆದ್ಯತೆ ಬಯುಸುವುದು ಸಹಜ, ಆದರೆ ಮುನ್ನಡೆಯಬೇಕೆಂಬ ಮನೋಬಲ, ಸದೃಢ ವಿಶ್ವಾಸ, ಶಿಕ್ಷಣ ಹಾಗೂ ಸ್ವಾವಲಂಭಿತನದ ಪರಿಜ್ಞಾನದೊಂದಿಗೆ ಛಲಗಾತಿಯಾರಾದಾಗ ಸ್ತ್ರೀ ಸಮೂಹದ ಉನ್ನತಿ ಸಾಧ್ಯವಿದೆ ಎಂದು ಬ್ಯಾರೀಸ್ ಸೀ ಸೈಡ್ ಸಿಬಿಎಸ್‌ಸಿ ಸ್ಕೂಲ್ ಪ್ರಾಂಶುಪಾಲರಾದ ರೇಷ್ಮಾ ಡಿಸೋಜಾ ಹೇಳಿದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿದ್ದಪ್ಪ ಕೆ. ಎಸ್. ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಸುನೀತಾ ಮೆನೇಜೆಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲಿಟಾ ಸ್ವಾಗತಿಸಿ, ಸಂಗೀತಾ ಕಾರ್ಯಕ್ರಮವನ್ನು ನಿರೂಪಿಸಿ, ಎಲ್ಲಮ್ಮಾ ವಂದಿಸಿದರು.