ಮಂಗಳೂರು: ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಗೆ ಪ್ರಥಮ ಸ್ಥಾನ
Update: 2018-03-08 23:27 IST
ಮಂಗಳೂರು, ಮಾ. 8: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಸಹಯೋಗದಲ್ಲಿ 2018ರ ಜನವರಿಲ್ಲಿ ನಡೆದ 10ನೆ ತರಗತಿ ಆಂಗ್ಲ ಮಾಧ್ಯಮ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಮಳ್‌ಹರ್ ಅಕಾಡಮಿ ಆಫ್ ಜನರಲ್ ಎಜುಕೇಶನ್ ಇದರ ಅಂಗ ಸಂಸ್ಥೆಯಾದ ಮರ್ಕಝುಲ್ ಹಿದಾಯ ವಿದ್ಯಾ ಸಂಸ್ಥೆಗೆ ಶೇ. 100 ಫಲಿತಾಂಶ ಬಂದಿದೆ.
ಸಂಸ್ಥೆಯಲ್ಲಿ ಕಲಿಯುತ್ತಿರುವ ಖತೀಜತುಲ್ ಕುಬ್ರ ಶೇ. 97 ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಈಕೆ ಮುಹಮ್ಮದ್ ಅಶ್ರಫ್ ಹಾಜಿ ಉಳ್ಳಾಲ ಮತ್ತು ಆಯಿಶಾ ಸೌದಾ ದಂಪತಿಯ ಪುತ್ರಿ. ಸಂಸ್ಥೆಯ ಅಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಶಹೀರ್ ತಂಙಳ್ ಮತ್ತು ಆಡಳಿತ ವರ್ಗವು ವಿದ್ಯಾರ್ಥಿನಿ, ಇತರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ವೃಂದದವರನ್ನು ಅಭಿನಂದಿಸಿದ್ದಾರೆ.