×
Ad

ಭಟ್ಕಳ: ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ಸಹಾಯಕ ಆಯುಕ್ತರಿಗೆ ಮನವಿ

Update: 2018-03-08 23:30 IST

ಭಟ್ಕಳ, ಮಾ. 8: ಮದಿನಾ ವೆಲ್ಫೇರ್ ಸೊಸೈಟಿಯ ವತಿಯಿಂದ ಮದೀನಾ ಕಾಲನಿ, ಹನೀಫಾಬಾದ್, ಉಮ್ಮರ್ ಸ್ಟ್ರೀಟ್, ಮೊಹಿಯುದ್ದೀನ್ ಸ್ಟ್ರೀಟ್ ಮುಂತಾದ ಕಡೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಆ ಭಾಗದಲ್ಲಿ ಯು.ಜಿ.ಡಿ. ಸಂಪರ್ಕ, ಮಳೆಗಾದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ, ಬೀದಿ ದೀಪದ ಅವಶ್ಯಕತೆ, ಮದಿನಾ ಮಸೀದಿಯ ಹಿಂಬದಿಯ ರಸ್ತೆ ಡಾಂಬರೀಕರಣ, ತೆಂಗಿನಗುಂಡಿ ರಸ್ತೆಯ ಅಕ್ಕ ಪಕ್ಕದಲ್ಲಿ ಗಿಡ-ಮರಗಳು ಬೆಳೆದುಕೊಂಡಿದ್ದು ಸ್ವಚ್ಚಗೊಳಿಸುವುದು, ನವಾಯತ ಕಾಲನಿ, ಮದಿನಾ ಕಾಲೋನಿ, ಜಾಮಿಯಾಬಾದ್, ತೆಂಗಿನಗುಂಡಿ ಮಾರ್ಗದಲ್ಲಿ ಬಸ್ ಸೌಲಭ್ಯವನ್ನು ವದಗಿಸುವುದು, ಹನೀಫಾಬಾದ್ - ಮದೀನಾ ಕಾಲೋನಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಹನೀಫಾಬಾದ್-ಮದೀನಾ ಕಾಲೋನಿಯಲ್ಲಿ ಕಸ ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪಟ್ಟಿ ಮಾಡಿದ್ದಾರೆ. 

ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಪ್ರೊ. ಹಾಷಿಮ್ ಜಝ್ರರಿ, ಪ್ರಧಾನ ಕಾರ್ಯದರ್ಶಿ ಮೌಲಾನಾ ಇರ್ಫಾನ್ ನದ್ವಿ, ಜಮೀಲ್ ಅರಬ್ ರುಕ್ನುದ್ದೀನ್, ಫೈಸಲ್ ಎಸ್. ಜೆ., ಅಬ್ದುಲ್ ಸಲಾಮ್, ಸಾಜಿದ್ ಮಿಸ್ಬಾ, ಅಫ್ತಾಬ್ ದಾಮದಾ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News